ಉತ್ತರ ಕನ್ನಡ
ಶಿರಸಿ: ಎಎಸ್ಐ ವಿರುದ್ಧ ಅತ್ಯಾಚಾರ ದೂರು ದಾಖಲು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯಲ್ಲಿ ಎ.ಎಸ್.ಐ ಅತ್ಯಾಚಾರ ಮಾಡಿದ ಕುರಿತು ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಎ.ಎಸ್.ಐ ಮಾದೇವ ಹಸ್ಲರ್ ಎಂಬ ಸಹಾಯಕ ಪೊಲೀಸ್ ಇನ್ಸಪೆಕ್ಟರ್ ಮೇಲೆ ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿದೆ.ಬನವಾಸಿಯ ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರೊಂದಿಗೆ ಸ್ನೇಹ ಬೆಳೆಸಿ ಅತ್ಯಾಚಾರ ಮಾಡಿದ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸಂತ್ರಸ್ತೆ ಮಹಿಳೆಯಿಂದ ಹಣ ಪಡೆದು ಈಕೆಗೆ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.




