Breaking NewsLatestಉತ್ತರ ಕನ್ನಡಜಿಲ್ಲಾ ಸುದ್ದಿ
ವಸತಿ ಶಾಲೆ ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಕಾರವಾರ : ಮೆಟ್ರಿಕ್ ನಂತರದ ಮಕ್ಕಳಿಗೆ ಆತ್ಮರಕ್ಷಣೆಗಾಗಿ ರಾಜ್ಯದ ವಸತಿ ಶಾಲೆಗಳು ಮತ್ತು ಹಾಸ್ಟೆಲ್ ಗಳ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತದೆ ಎಂದು ಹಿಂದುಳಿದ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ಓಬವ್ವ ಆತ್ಮರಕ್ಷಣೆ ಕಲೆ ಹೆಸರಲ್ಲಿ ಕರಾಟೆ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ.ದೈಹಿಕವಾಗಿ ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ಮತ್ತು ಸ್ವಯಂರಕ್ಷಣೆ ಈ ಶಿಕ್ಷಣದ ಅಗತ್ಯವಾಗಿದೆ ಎಂದರು.
ರಾಜ್ಯದ 1702 ಶಿಕ್ಷಣ ಸಂಸ್ಥೆಗಳಲ್ಲಿ,182000 ವಿದ್ಯಾರ್ಥಿನಿಯರಿಗೆ ಕರಾಟೆ ಶಿಕ್ಷಣ ನೀಡಲಾಗುತ್ತದೆ.ಇದಕ್ಕಾಗಿ ತರಬೇತುದಾರರಾಗಿ ಬ್ಲ್ಯಾಕ್ ಬೆಲ್ಟ್ ಪಡೆದ ಮಹಿಳೆಯರಿಂದ ತರಬೇತಿ ನೀಡಲಾಗುತ್ತದೆ. ಫೆಬ್ರವರಿ 7 ರಂದು ಮುಖ್ಯಮಂತ್ರಿಗಳು ಓಬವ್ವ ಆತ್ಮರಕ್ಷಣೆ ಕಲೆ ಉದ್ಘಾಟನೆ ಮಾಡುತ್ತಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
