ಮನರಂಜನೆಸಿನಿಮಾ

ರಾಕಿಭಾಯ್ ಜೊತೆ ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ಕೆಜಿಎಫ್ -2 ಬಿಡುಗಡೆಯ ಹಂತ ತಲುಪಿದೆ. ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಎಡಿಟಿಂಗ್ ಕೆಲಸ ಮಾತ್ರ ಭರದಿಂದ ಸಾಗುತ್ತಿದೆ. ಇದಕ್ಕಾಗಿ ಇಡೀ ಚಿತ್ರರಂಗವೇ ಕೆಲವು ದಿನಗಳಿಂದ ಕುಂದಾಪುರದ ಸಂಗೀತ ನಿರ್ದೇಶಕ ರವಿ ಬಸ್ರೂರು ಮನೆಯಲ್ಲೇ ಬೀಡುಬಿಟ್ಟಿದ್ದಾರೆ.

ಅವರ ಸ್ಟುಡಿಯೋದಲ್ಲಿ ಕೆಜಿಎಫ್ -2 ಕೊನೆ ಹಂತದ ಎಡಿಟಿಂಗ್ ಕಾರ್ಯ ನಡೆಯುತ್ತಿದೆ. ಹೀಗಾಗಿ ಚಿತ್ರತಂಡ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿದೆ. ಇತ್ತೀಚೆಗಷ್ಟೇ ರಾಕಿಭಾಯ್ ಅಭಿಮಾನಿಗಳ ಜೊತೆಗೆ ಕ್ರಿಕೆಟ್ ಆಡಿದ್ದರು. ನಂತರ ಅವರು ಟೆಂಪಲ್ ರನ್ ಕೂಡ ನಡೆಸಿದ್ದರು. ಇದೀಗ ಯಶ್ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ.

ಹೌದು ಇಂದು ರಾಕಿಭಾಯ್ ನೋಡಲು ಸ್ಟುಡಿಯೋ ಮುಂದೆ ಜನಸಾಗರವೇ ಹರಿದುಬಂದಿದೆ. ನೆಚ್ಚಿನ ನಟ ಯಶ್ ಭೇಟಿ ಮಾಡಲು ಅಭಿಮಾನಿಗಳು ಬಂದಿದ್ರು. ಈ ವೇಳೆ ಅಭಿಮಾನಿಗಳು ಯಶ್ ಜೊತೆ ಸೆಲ್ಫಿಗಾಗಿ ಮುಗಿಬಿದ್ರು

Related Articles

Leave a Reply

Your email address will not be published. Required fields are marked *

Back to top button