ಉತ್ತರ ಕನ್ನಡಜಿಲ್ಲಾ ಸುದ್ದಿ

ಶಿರಸಿ : ಸ್ಟುಡಿಯೋದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮಂಜು ಸ್ಟುಡಿಯೋದಲ್ಲಿ ಕಳ್ಳತನವಾಗಿದ್ದ ಪ್ರಕರಣವನ್ನು ಶಿರಸಿ ನಗರ ಠಾಣೆ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಶಿರಸಿ ಮಾರ್ಕೇಟ್ ರಸ್ತೆಯ ಸಿ.ಎಮ್.ಸಿ ಕಾಂಪ್ಲೆಕ್ಸಿನಲ್ಲಿ ಇರುವ ಮಂಜು ಡಿಜಿಟಲ್ ಫೋಟೋ ಸ್ಟುಡಿಯೋದ ಕ್ಯಾಮೆರಾ ಸೇರಿದಂತೆ ಇತರೆ ವಸ್ತುಗಳನ್ನು ಕಳ್ಳರು ಕಳ್ಳತನ ಮಾಡಿದ್ದರು. ಒಟ್ಟು 70 ಸಾವಿರ ರೂ.ಮೌಲ್ಯದ ಕ್ಯಾಮೆರಾ ಸೇರಿದಂತೆ ಇತರೆ ವಸ್ತುಗಳು ಕಳ್ಳತನವಾಗಿತ್ತು.

ಕಳವು ಪ್ರಕರಣದಲ್ಲಿನ ಆರೋಪಿತನಾದ ಶಿವಮೊಗ್ಗದ ಗಿರೀಶ ಶಿವಪ್ಪ ಭಜಂತ್ರಿ (22) ಈತನನ್ನು ದಸ್ತಗಿರಿ ಮಾಡಿ,ಈತನಿಂದ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button