Breaking NewsLatestರಾಷ್ಟ್ರೀಯ

ಹೆಲಿಕಾಪ್ಟರ್ ದುರಂತ: ನಾಳೆ ಬಿಪಿ ರಾವತ್ ಅಂತ್ಯಕ್ರಿಯೆ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ ಜನರ್ಲ ಬಿಪಿ ರಾವತ್, ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯನ್ನು ಬಲಿ ತೆಗೆದುಕೊಂಡ ಹೆಲಿಕಾಪ್ಟರ್ ದುರಂತ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನ ಉಭಯ ಸದನಗಳಲ್ಲಿ ಇಂದು ಹೇಳಿಕೆ ನೀಡಲಿದ್ದಾರೆ.

ನಿನ್ನೆ ತಮಿಳುನಾಡಿನ ಕೊಯಂಬತ್ತೂರ್​ನಲ್ಲಿ ಬೆಳಗ್ಗೆ 11.45ಕ್ಕೆ ಈ ದುರಂತ ಸಂಭವಿಸಿತ್ತು. ಸುಲೂರ್ ವಾಯುಪಡೆ ನೆಲೆಯಿಂದ ಹಾರಿದ ಕೆಲವೇ ಸಮಯದಲ್ಲಿ ಅದು ಅವಘಡಕ್ಕೀಡಾಯಿತು. ಹೆಲಿಕಾಪ್ಟರ್​ನಲ್ಲಿ ರಾವತ್ ನೀಲಗಿರಿ ಹಿಲ್ಸ್​ನ ವೆಲ್ಲಿಂಗ್ಟನ್​ಗೆ ಸೇನಾ ಸೇಔಆ ಸಿಬ್ಬಂದಿ ಕಾಲೇಜಿನಲ್ಲಿ ಭಾಷಣ ಮಾಡುವುದಕ್ಕೆ ಹೊರಟಿದ್ದರು. ಈ ವೇಳೆ ಅವರ ಪತ್ನಿ ಸೇರಿದಂತೆ ಒಟ್ಟು 14 ಮಂದಿ ಹೆಲಿಕಾಪ್ಟರ್​ನಲ್ಲಿದ್ದರು.

ರಾವತ್ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಇಂದು ಸಂಜೆಯ ವೇಳೆಗೆ ಅವರ ಪಾರ್ಥಿವ ಶರೀರ ಸೇನಾ ವಿಮಾನದಲ್ಲಿ ದೆಹಲಿ ತಲುಪುವ ನಿರೀಕ್ಷೆಯಿದೆ.

Spread the love

Related Articles

Leave a Reply

Your email address will not be published. Required fields are marked *

Back to top button