ಉತ್ತರ ಕನ್ನಡ
ಹೊನ್ನಾವರದಲ್ಲಿ ಮಳೆಯ ಆರ್ಭಟ; ಅನೇಕ ಮನೆಗಳಿಗೆ ಹಾನಿ

ಕಾರವಾರ : ಹೊನ್ನಾವರ ತಾಲೂಕಿನಾದ್ಯಂತ ಆರ್ಭಟಿಸಿದ ಮಳೆಗೆ ಜನಜೀವನ ಸ್ತಭ್ದವಾಗಿದೆ.ಕಳೆದ ಎಂಟು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದೆ. ಕಳೆದ ಎರಡು ದಿನದಿಂದ ತಾಲೂಕಿನ ಹಲವಾರು ಕಡೆ ಅನೇಕ ಮನೆಗಳಿಗೆ ಹಾನಿ ಸಂಭವಿಸಿದೆ.
ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಶಂಕ್ರುಕೇರಿಯಲ್ಲಿ ಗಣಪಿ ಕೃಷ್ಣ ಗೌಡ ಇವರ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿ ಹೋಗಿ ಹಾನಿ ಸಂಭವಿಸಿದೆ.ಇದೇ ಗ್ರಾಮದ ವಿಜಯ ರಮಾಕಾಂತ ಹಳದೀಪುರ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ.
ಸಾಲ್ಕೋಡ ಗ್ರಾಮದ ಕಾನಕ್ಕಿಯ ನಾರಾಯಣ ಹರಿಯಾ ಮರಾಠಿ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ.ಮಾಗೋಡ ಗ್ರಾಮದ ಕುಚ್ಚೋಡಿಯ ಇಸ್ಮಾಯಿಲ್ ಖಾನ್ ಮನೆಯ ಹಿಂಬದಿಯ ಗೋಡೆ ಕುಸಿದು ಹಾನಿ ಸಂಭವಿಸಿದೆ.
ಕಡತೋಕಾ ಗ್ರಾಮದ ಹೆಬ್ಬೆಕೊಪ್ಪ ಮಜರೆಯ ಕುಪ್ಪುರಾಮಾ ಮುಕ್ರಿ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿ ಉಂಟಾಗಿದೆ.ಹಾನಿ ಸಂಭವಿಸಿದ ಮನೆಗಳಿಗೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ ಎಂದು ಹೊನ್ನಾವರ ತಹಶೀಲ್ದಾರ ವಿವೇಕ ಶೇಣ್ವಿ ಮಾಹಿತಿ ನೀಡಿದ್ದಾರೆ.




