Breaking Newsಇತರ ಕ್ರೀಡೆಕ್ರೀಡೆ
ಕ್ವಾರ್ಟರ್ ಫೈನಲ್ ಗೆ ಸಿಂಧೂ, ಹಾಕಿಯಲ್ಲಿ ಅದ್ಭುತ ಸಾಧನೆ

ಟೋಕಿಯೋ : ಪಿ.ವಿ.ಸಿಂಧೂ ಬ್ಯಾಡ್ಮಿಂಟನ್ ನಲ್ಲಿ ಹಾಗೂ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ನ ಕ್ವಾರ್ಟರ್ ಫೈನಲ್ ತಲುಪಿದೆ. ಇದರೊಂದಿಗೆ ಭಾರತಕ್ಕೆ ಪದಕಗಳ ಭರವಸೆ ಜೀವಂತವಾಗಿದೆ.
ಡೆನ್ಮಾರ್ಕಿನ ಮಿಯಾ ಬ್ಲೀಚ್ ಫೀಲ್ಡ್ ವಿರುದ್ಧ 21-15, 21-13 ಅಂತರದಲ್ಲಿ ಸಿಂಧೂ ಜಯ ಗಳಿಸಿದರು. ಮೊದಲ ಗೇಮ್ ನಲ್ಲಿ ಮಿಯಾ ಉತ್ತಮ ರೀತಿಯಲ್ಲಿ ಸವಾಲನ್ನೊಡ್ಡಿದ್ದರು, ಆದರೆ ರಿಯೋ ದಲ್ಲಿ ಬೆಳ್ಳಿ ಗೆದ್ದಿರುವ ಸಿಂಧೂ ಒತ್ತಡಕ್ಕೆ ಸಿಲುಕದೆ ಜಯ ಸಾಧಿಸಿದರು.
ಹಾಕಿಯಲ್ಲಿ ಅದ್ಭುತ ಸಾಧನೆ:
ಆಸ್ಟ್ರೇಲಿಯಾ ವಿರುದ್ಧ 1-7 ಅಂತರದಲ್ಲಿ ಅನುಭವಿಸಿದ ಸೋಲಿನಿಂದ ಪಾಠ ಕಲಿತ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ ಹಾಲಿ ಚಾಂಪಿಯನ್ ಅರ್ಜೆಂಟೀನಾ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದೆ. ಭಾರತದ ಪರ ವರುಣ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್ ಮತ್ತು ಹರ್ಮನ್ ಪ್ರೀತ್ ಸಿಂಗ್ ಗೋಲು ಗಳಿಸಿದರು. ಅರ್ಜೆಂಟೀನಾ ಪರ ಮಾಸಿಯೋ ಕೆಸೆಲ್ಲೋ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.
