ದಕ್ಷಿಣ ಕನ್ನಡ

ವಿವಾಹವಾಗಬೇಕಿದ್ದ ಯುವಕನ ಕೊಲೆ; ಅಪರಾಧಿಗಳಿಗೆ ಜೀವಾವಧಿ

ಮಂಗಳೂರು: ವಿವಾಹಕ್ಕೆ ನಿಶ್ಚಿತಾರ್ಥ ನಡೆಯುವ ಮುನ್ನ ಯುವಕ ಕೊಲೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 6 ಮಂದಿ ಅಪರಾಧಿಗಳಿಗೆ ದಕ್ಷಿಣ ಕನ್ನಡ ಸೆಷನ್ಸ್​ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.

ಕಳೆದ 2017 ಏ.30ರಂದು ಧರ್ಮಸ್ಥಳ ಸಮೀಪದ ಪಟ್ರಮೆ ಎಂಬಲ್ಲಿ ಘಟನೆ ನಡೆದಿತ್ತು. ಸುರೇಶ್ ನಾಯ್ಕ ಎಂಬ ಯುವಕ ಕೊಲೆಯಾಗಿದ್ದ.

ಸುರೇಶ್ ನಾಯ್ಕ ವಿವಾಹವಾಗಬೇಕಿದ್ದ ಯುವತಿಯನ್ನು ಆನಂದ ನಾಯ್ಕ ಏಕಮುಖವಾಗಿ ಪ್ರೀತಿಸುತ್ತಿದ್ದ. ಐದು ಜನ ಸ್ನೇಹಿತರ ಜತೆ ಸೇರಿ ಹತ್ಯೆ ನಡೆದಿದೆ.

ವಿನಯ್, ಪ್ರವೀಣ್ ನಾಯ್ಕ, ಲೋಕೇಶ, ಪ್ರಕಾಶ್, ನಾಗರಾಜ ಮೂಲ್ಯ ಇತರ ಆರೋಪಿಗಳು. ಸುರೇಶ್ ನಾಯ್ಕನ ಅಪಹರಿಸಿ ಕೊಲೆಗೈದು ಬೆಂಕಿಯಲ್ಲಿ ಆಹುತಿ ಮಾಡಿದ್ದರು.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button