Breaking Newsಇತರ ಕ್ರೀಡೆಕ್ರೀಡೆ
ಆರ್ಚರಿ: ಶೂಟ್ ಆಫ್ ನಲ್ಲಿ ಗೆದ್ದ ಅತನು ದಾಸ್

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್ ನಲ್ಲೇ ಅತ್ಯಂತ ರೋಚಕ ಹೋರಾಟವೆನಿಸಿದ ಆರ್ಚರಿ ಶೂಟ್ ಆಫ್ ನಲ್ಲಿ ಭಾರತದ ಅತನು ದಾಸ್ ರಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕೊರಿಯಾದ ಹೊ ಜಿನ್ ಹೆಕ್ ವಿರುದ್ಧ ಜಯ ಗಳಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಮೊದಲ ಐದು ಸುತ್ತುಗಳಲ್ಲಿ ಹೋರಾಟ ಸಮಬಲಗೊಂಡಿತ್ತು. ಇದರಿಂದಾಗಿ ಪಂದ್ಯ ಶೂಟ್ ಆಫ್ ಗೆ ಅಳವಡಿಸಲಾಯಿತು. ಅಂತಿಮವಾಗಿ ಅತನು ದಾಸ್ 6-5 ಅಂತರದಲ್ಲಿ ಜಯ ಗಳಿಸಿ ಕೊರಿಯಾದ ಹೇಕ್ ಗೆ ಶಾಕ್ ನೀಡಿದರು.
ನಿಖರ ಗುರಿ ಇತ್ತ ದಾಸ್, 26-26, 27-27, 27-27, 27-22, 28-28 ಅಂತರದಲ್ಲಿ ಸಮಬಲವಾಯಿತು. ಅಂತಿಮ ಶೂಟ್ ಆಫ್ ನಲ್ಲಿ ಅತನು ನಿಖರ 10 ಅಂಕ ಗಳಿಸುವ ಮೂಲಕ ಪ್ರಭುತ್ವ ಸಾಧಿಸಿದರು.
