ಕಬ್ಬಿನ ಹಾಲಿನ ಪಾಯಸ

ಸಿಹಿಯಾಗಿರುವ ಕಬ್ಬಿನ ಹಾಲು ಇಷ್ಟಪಡದವ್ರು ಯಾರಿದ್ದಾರೆ ಹೇಳಿ. ಪ್ರತಿಯೊಬ್ಬರಿಗೂ ಈ ಸಿಹಿ ಪೇಯ ತುಂಬಾನೇ ಇಷ್ಟ. ನಾಲಿಗೆಯ ರುಚಿಯ ಜೊತೆಗೆ ಆರೋಗ್ಯಕ್ಕೂ ಕಬ್ಬಿನ ಹಾಲು ಅತ್ಯುತ್ತಮ. ಈ ಕಬ್ಬಿನ ಹಾಲಿನಿಂದ ಪಾಯಸ ಕೂಡ ಮಾಡಿ ಸವಿಯ ಬಹುದು. ಹಾಗಾದ್ರೆ ಈ ಕಬ್ಬಿನ ಹಾಲಿನ ಪಾಯಸ ಮಾಡೋದು ಹೇಗೆ ಅನ್ನೋದನ್ನ ಹೇಳ್ತಿವಿ ನೋಡಿ.
ಹಾಲು ಒಂದು ಸಣ್ಣ ಬಟ್ಟಲು
ಕಬ್ಬಿನ ರಸ ಒಂದು ದೊಡ್ಡ ಲೋಟ
ದ್ರಾಕ್ಷಿ, ಗೋಡಂಬಿ ಒಂದು ಕಪ್
ತುಪ್ಪ ಸ್ವಲ್ಪ
ಅಕ್ಕಿ ಸಣ್ಣ ಬಟ್ಟಲು
ದಪ್ಪ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ದ್ರಾಕ್ಷಿ, ಗೋಡಂಬಿ ಕೆಂಪು ಬಣ್ಣ ಬರುವ ವರೆಗೂ ಹುರಿದುಕೊಳ್ಳಬೇಕು. ದ್ರಾಕ್ಷಿ, ಗೋಡಂಬಿ ಬೇರೆ ಪಾತ್ರೆಯಲ್ಲಿ ಇಟ್ಟುಕೊಂಡು ಅದೇ ಪಾತ್ರೆಗೆ ಕಬ್ಬಿನ ರಸ ಹಾಕಿ ಬಿಸಿಯಾಗುವವರೆಗೂ ಕೈಯಾಡಿಸುತ್ತಿರಬೇಕು. ಬಳಿಕ ಕಬ್ಬಿನ ಹಾಲಿನ ಜೊತೆ ಹಾಲನ್ನ ಬೆರೆಸಿ ಐದು ನಿಮಿಷ ಕುದಿಯಲು ಬಿಡಬೇಕು. ಬಳಿಕ ಕಾಯಲು ಇಟ್ಟ ಕಬ್ಬಿನ ಹಾಲು ಹಾಗೂ ಹಾಲಿನ ಮಿಶ್ರಣಕ್ಕೆ ಅಕ್ಕಿಯನ್ನ ಹಾಕಿ ಬೇಯಲು ಬಿಡಿ. ಅಕ್ಕಿ ಬೆಂದ ಬಳಿಕ ದ್ರಾಕ್ಷಿ, ಗೋಡಂಬಿ ಹಾಕಿ ರುಚಿ ರುಚಿಯಾದ ಕಬ್ಬಿನ ಹಾಲು ಸವಿಯಲು ಕೊಡಿ.




