ಆಹಾರಲೈಫ್ ಸ್ಟೈಲ್
ಹೆಸರುಕಾಳು ಸಲಾಡ್

ಬೇಸಿಗೆಯಲ್ಲಿ ಯಾವುದೇ ಬಿಸಿ ಬಿಸಿ ಪದಾರ್ಥಗಳನ್ನ ನೋಡಿದರು ತಿನ್ನಬೇಕು ಅನ್ನಿಸೋದಿಲ್ಲ. ತಂಪಾಗಿರುವ ಪದಾರ್ಥಗಳತ್ತ ಮನಸು ಹೋಗುತ್ತೆ. ಹಾಗಾದ್ರೆ ಬೇಸಿಗೆಗೆ ಹಿತವಾಗಿ, ಸುಲಭವಾಗಿ ತಯಾರಿಸುವ, ಜಿಡ್ಡು ರಹಿತ ತಿನಿಸಿನ ರೆಸಿಪಿ ಇಲ್ಲಿದೆ ನೋಡಿ.
ಹೆಸರುಕಾಳು ಚಾಟ್ಸ್
ಬೇಕಾಗುವ ಸಾಮಗ್ರಿಗಳು: ಮೊಳಕೆಕಟ್ಟಿದ ಹೆಸರುಕಾಳು 1 ಕಪ್, ಕ್ಯಾರೆಟ್ ತುರಿ ½ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ 1/4ಕಪ್, ಚಾಟ್ ಮಸಾಲ, ಉಪ್ಪು
ತಯಾರಿಸುವ ವಿಧಾನ: ಬೌಲ್ ನಲ್ಲಿ ಮೊಳಕೆಕಟ್ಟಿದ ಹೆಸರುಕಾಳು, ಕ್ಯಾರೆಟ್ ತುರಿ, ಈರುಳ್ಳಿ,ಗೆ ರುಚಿಗೆ ತಕ್ಕಷ್ಟು ಚಾಟ್ ಮಸಾಲ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದು ನಾಲಿಗೆಯ ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು. ಸಣ್ಣ ಮಕ್ಕಳಿಗೂ ಇದನ್ನು ಸವಿಯಲು ಕೊಡಬಹುದು.




