ಆರೋಗ್ಯಲೈಫ್ ಸ್ಟೈಲ್

ಸಬ್ಬಕ್ಕಿ ಹಪ್ಪಳ

ಬೇಕಾಗುವ ಸಾಮಾಗ್ರಿಗಳು
ಸಾಬುದಾನ 1 ಕಪ್
ನೀರು 4 ಕಪ್
ಮೆಣಸಿನ ಬೀಜ 1 ಚಮಚ
ಕರಿಮೆಣಸು 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಸಾಬುದಾನವನ್ನು 4-5 ಗಂಟೆಗಳ ಕಾಲ ನೆನೆಸಿಡಿ. ಬಳಿಕ ದಪ್ಪ ತಳವಿರುವ ಬಾಣಲೆಗೆ ಹಾಕಿಕೊಂಡು, ಇದಕ್ಕೆ 4 ಕಪ್ ನೀರು ಸೇರಿಸಿ ಕುದಿಯಲು ಬಿಡಿ. ಇದಕ್ಕೆ ಮೆಣಸಿನ ಕಾಯಿ ಪೇಸ್ಟ್, ಕರಿಮೆಣಸಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಇವೆಲ್ಲಾವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಾಬುದಾನ ಮೃದುವಾಗುವವರೆಗೆ, ಮಿಶ್ರಣವನ್ನು ಸುಮಾರು ಹತ್ತು ನಿಮಿಷಗಳವರೆಗೆ ಬೇಯಲು ಬಿಡಿ. ಮಧ್ಯದಲ್ಲಿ ಕೈಯಾಡಿಸುತ್ತಾ ಇರಬೇಕು. ಕ್ರಮೇಣ ಈ ಮಿಶ್ರಣ ದಪ್ಪ ಆಗುತ್ತಾ ಬಂದ ಹಾಗೆ, ಗ್ಯಾಸ್ ಸ್ಟೌವ್ ಆಫ್ ಮಾಡಿ, ನಂತರ 10-15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ. ಸಾಬುದಾನ ಹಪ್ಪಳದ ಮಿಶ್ರಣವನ್ನುದೊಡ್ಡ ಪೇಪರ್ ಮೇಲೆ ಚಮಚದ ಸಹಾಯದಿಂದ, ಸಣ್ಣ ಸಣ್ಣ ಹಪ್ಪಳದ ಆಕಾರದಲ್ಲಿ ಹಾಕಿರಿ. ಹಪ್ಪಳವನ್ನು 2-3 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ, ಇದರಿಂದ ಹಪ್ಪಳವು ದೀರ್ಘ ಕಾಲದವರೆಗೆ ಗರಿಗರಿಯಾಗಿ, ಸಖತ್ ರುಚಿಯಾಗಿಯೂ ಕೂಡ ಇರುತ್ತದೆ

Related Articles

Leave a Reply

Your email address will not be published. Required fields are marked *

Back to top button