ನಿಮಗೆ ರಾತ್ರಿ ನಿದ್ದೆ ಬರ್ತಿಲ್ವ; ಹೀಗೆ ಕೆಲ ಟಿಪ್ಸ್ ಫಾಲೋ ಮಾಡಿ

ಇತ್ತೀಚಿನ ದಿನಗಳಲ್ಲಿ ಜನರಿಗೆ ಸರಿಯಾಗಿ ನಿದ್ದೆ ಬರದೆ ಒದ್ದಾಡುತ್ತಿರುತ್ತಾರೆ. ತುಂಬಾ ಜನರಿಗೆಈಗಿನ ಹೆಚ್ಚಿನ ಒತ್ತಡದಿಂದ ನಿದ್ದೆ ಬರುವುದಿಲ್ಲ. ಮೂರು ಹೊತ್ತು ಲ್ಯಾಪ್ ಟಾಪ್ ಹಾಗೂ ಫೋನ್ ಗಳಲ್ಲಿ ಹೆಚ್ಚು ಜನ ತಲ್ಲಿನರಾಗಿರುತ್ತಾರೆ.ಹೀಗಾಗಿ ರಾತ್ರಿ ನಿದ್ದೆ ಬರುವುದಿಲ್ಲ. ನಿಮಗೆ ಈಗ ದಿನನಿತ್ಯ ಸುಖ ನಿದ್ರೆ ಮಾಡಬೇಕು ಅಂದುಕೊಳ್ಳುತ್ತೀರಾ? ಹೀಗಿರುವಾಗ ನಿದ್ದೆ ಬರುವುದಕ್ಕೆ ಕೆಲ ಟಿಪ್ಸ್ ಗಳನ್ನು ಫಾಲೋ ಮಾಡಿ…

ಮದ್ಯಪಾನ, ಸಿಗರೇಟ್ ಮತ್ತು ಸಂಜೆ ಅತಿಯಾಗಿ ತಿನ್ನುವುದನ್ನು ತಪ್ಪಿಸಿ. ಆಲ್ಕೋಹಾಲ್, ಸಿಗರೇಟ್ ಮತ್ತು ಕೆಫೀನ್ ನಿದ್ರೆಗೆ ಅಡ್ಡಿಯಾಗಬಹುದು. ಹೆಚ್ಚಿನ, ಮಸಾಲೆಯುಕ್ತ ಊಟವು ಅಜೀರ್ಣದ ಕಾರಣದಿಂದಾಗಿ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ.
ಮಲಗುವ ಸಮಯಕ್ಕೆ ಎರಡು ಅಥವಾ ಮೂರು ಗಂಟೆಗಳ ಮೊದಲು ತಿನ್ನಬೇಡಿ. ನಿಮಗೆ ಹಸಿವಾಗಿದ್ದರೆ, ಮಲಗುವ 45 ನಿಮಿಷಗಳ ಮೊದಲು ಲಘು ತಿಂಡಿಗಳನ್ನು ಮಾತ್ರ ತಿನ್ನಿ.

ಮಲಗುವ ಮುನ್ನ ಪುಸ್ತಕಗಳನ್ನು ಓದುವಂತಹ ಚಟುವಟಿಕೆಯನ್ನು ಮಾಡಿ. ಕೆಲವರಿಗೆ ಲ್ಯಾಪ್ ಟಾಪ್ ನಂತಹ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ನಿದ್ದೆ ಬರುವುದಿಲ್ಲ.
ನಿರ್ದಿಷ್ಟ ಚಟುವಟಿಕೆ ಅಥವಾ ವಸ್ತುವು ನಿಮ್ಮ ನಿದ್ರೆಗೆ ಅಡ್ಡಿಪಡಿಸುತ್ತದೆ ಎಂದು ನೀವು ಕಂಡುಕೊಂಡರೆ, ಅದನ್ನು ಬಳಕೆ ಮಾಡಬೇಡಿ. ಹೆಚ್ಚು ಸಮಸ್ಯೆ ಕಂಡು ಬಂದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.




