ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಸಮನ್ಸ್ ಜಾರಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಈಗ ಕೊಂಚ ಮಟ್ಟಿಗೆ ಸುಧಾರಿಸಿ ಕೊಳ್ತಿದ್ದಾರೆ. ಅಶ್ಲೀವಿ ವಿಡಿಯೋ ಪ್ರಕರಣದಲ್ಲಿ ಪತಿ ರಾಜ್ ಕುಂದ್ರಾ ಒಂದಷ್ಟು ಸಮಯ ಜೈಲಿನಲ್ಲಿ ಕಳೆದು ಬಂದಿದ್ದರು. ಈ ಸಮಯದಲ್ಲಿ ಶಿಲ್ಪಾ ಶೆಟ್ಟಿಯನ್ನ ಪೊಲೀಸರು ಸಾಕಷ್ಟು ವಿಚಾರಣೆ ನಡೆಸಿದ್ರು. ಇನ್ನೆನ್ನೂ ಎಲ್ಲವೂ ಸರಿ ಹೋಯ್ತು ಅನ್ನುವಾಗ್ಲೆ ಮತ್ತೆ ಪೊಲೀಸರು ಶಿಲ್ಪಾ ಕುಟುಂಬಕ್ಕೆ ಸಮನ್ಸ್ ಜಾರಿ ಮಾಡಿದ್ದಾರೆ.
ಅಶ್ಲೀಲ ಸಿನಿಮಾ ನಿರ್ಮಾಣ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ ಶಿಲ್ಪಾ ಶೆಟ್ಟಿ ಪತಿ ರಾಜ್ಕುಂದ್ರಾ ಎರಡು ತಿಂಗಳ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ಪತಿ ಜೈಲಿನಲ್ಲಿದ್ದ ಸಂದರ್ಭದಲ್ಲಿ ಶಿಲ್ಪಾ ಸಿನಿಮಾ ಹಾಗೂ ರಿಯಾಲಿಟಿ ಶೋನಿಂದ ಅಂತರ ಕಾಯ್ದುಕೊಂಡಿದ್ದರು. ಅಲ್ಲದೆ ಕೆಟ್ಟ ಚಂಡಮಾರುತದ ನಂತರ ಒಳ್ಳೆಯ ಸಂಗತಿಗಳು ಬರುತ್ತವೆ ಎಂದು ಬರೆದುಕೊಂಡಿದ್ದರು. ಇನ್ನೆನ್ನೂ ಎಲ್ಲವೂ ಮುಗಿದು ಒಳ್ಳೆಯ ದಿನ ಬಂತು ಅನ್ನವಾಗ್ಲೆ ಮತ್ತೆ ಪೊಲೀಸರು ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಸಮನ್ಸ್ ಜಾರಿ ಮಾಡಿದ್ದಾರೆ.
ರಾಜ್ ಕುಂದ್ರಾ ಜೈಲಿನಲ್ಲಿದ್ದ ಸಂದರ್ಭದಲ್ಲಿ ಉದ್ಯಮಿ ಫರ್ಹಾದ್ ಅಮ್ರ ಹೆಸರಿನ ಉದ್ಯಮಿಯೊಬ್ಬರು ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಕುಟುಂಬದ ವಿರುದ್ಧ ದೂರು ನೀಡಿದ್ದರು. ನಟಿ ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟ ಹಾಗೂ ತಾಯಿ ಸುನಂದಾ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.
2015ರಲ್ಲಿ ಶಿಲ್ಪಾ ಶೆಟ್ಟಿ ತಂದೆ 21 ಲಕ್ಷ ರೂಪಾಯಿ ಸಾಲ ಪಡೆದಿದ್ದು 2017ರಲ್ಲಿ ತೀರಿಸಬೇಕಿತ್ತು ಆದರೆ ತೀರಿಸಿಲ್ಲ. ಇದೀಗ ಅವರ ಮಕ್ಕಳಾದ ಶಿಲ್ಪಾ, ಶಮಿತಾ ಹಾಗೂ ಪತ್ನಿ ಸುನಂದಾ ಈ ಸಾಲವನ್ನು ತೀರಿಸಬೇಕಿದೆ. ಆದರೆ ತಾವು ಸಾಲ ತೀರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆ ಮುಂಬೈನ ಅಂಧೇರಿ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ. ಇದೀಗ ನ್ಯಾಯಾಲಯವು ಶಿಲ್ಪಾ, ಶಮಿತಾ ಹಾಗೂ ಸುನಂದಾಗೆ ಸಮನ್ಸ್ ಜಾರಿ ಮಾಡಿದ್ದು ಫೆಬ್ರವರಿ 28ರ ಒಳಗಾಗಿ ಈ ಮೂವರೂ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿದೆ.




