ಆರೋಗ್ಯಆಹಾರಲೈಫ್ ಸ್ಟೈಲ್
ಬಿಳಿ ಬ್ರೆಡ್ ಸೇವನೆ ಏಕೆ ಒಳ್ಳೆಯದಲ್ಲ

ಪವಿತ್ರಾ ಶೆಟ್ಟಿ
ಅಂಗಡಿಗಳಲ್ಲಿ ಸಿಗುವ ಬಿಳಿ ಬ್ರೆಡ್ ಬಾಯಿಗೆ ರುಚಿ ಆಗುವುದೇನೋ ನಿಜ. ಆದರೆ ಇದರ ಸೇವನೆಯಿಂದ ದೇಹಕ್ಕೆ ಏನೆಲ್ಲಾ ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟಿಗೆ ಹಲವು ರಾಸಾಯನಿಕಗಳನ್ನು ಬೆರೆಸುತ್ತಾರೆ. ಅದರ ಪರಿಣಾಮ ಬ್ರೆಡ್ ಬೆಳ್ಳಗೆ ಕಾಣುತ್ತದೆ. ಹಾಗಾಗಿ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.
ಬಿಳಿ ಬ್ರೆಡ್ಡನ್ನು ಹೆಚ್ಚು ಸಂಸ್ಕರಿಸಿದ ಪರಿಣಾಮ ಅದರಲ್ಲಿರುವ ಪೋಷಕಾಂಶಗಳು ನಾಶವಾಗಿರುತ್ತದೆ. ಪ್ರತಿದಿನ ಬ್ರೆಡ್ ಸೇವಿಸುವ ಅಭ್ಯಾಸ ನಿಮಗಿದ್ದರೆ ಅದನ್ನು ಕೈಬಿಡುವುದು ಒಳ್ಳೆಯದು.
ಇದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಧುಮೇಹ ಸಮಸ್ಯೆ ಇರುವವರಿಗೆ ಬಿಳಿ ಬ್ರೆಡ್ ಖಂಡಿತ ಒಳ್ಳೆಯದಲ್ಲ. ನಿರಂತರವಾಗಿ ಇದನ್ನು ಸೇವಿಸುವುದರಿಂದ ದೇಹದ ತೂಕವೂ ಹೆಚ್ಚುತ್ತದೆ. ಇದರಲ್ಲಿ ಅತ್ಯಧಿಕ ಮಟ್ಟದ ಕಾರ್ಬೋಹೈಡ್ರೇಟ್ ಗಳಿವೆ. ನೀವು ಡಯಟ್ ಪ್ಲಾನ್ ಮಾಡುತ್ತಿದ್ದಾರೆ ಕಡ್ಡಾಯವಾಗಿ ಬಿಳಿ ಬ್ರೆಡ್ ನಿಂದ ದೂರವಿರಿ.




