ಆರೋಗ್ಯಲೈಫ್ ಸ್ಟೈಲ್

ವಿನಾಕಾರಣ ಕಾಲು ಊದಿಕೊಂಡಿದೆಯೇ?

ಪವಿತ್ರಾ ಶೆಟ್ಟಿ

ಗರ್ಭಿಣಿಯರಿಗೆ ಕಾಲಿನಲ್ಲಿ ನೀರು ಬಂದು ದಪ್ಪವಾಗುವುದುಂಟು. ಇದು ಯಾಕೆ ಹೀಗಾಗುತ್ತದೆ? ವೈದ್ಯರು ಇದಕ್ಕೆ ಏನು ಹೇಳುತ್ತಾರೆ?

ಹೆಚ್ಚು ಹೊತ್ತು ಒಂದೇಕಡೆ ಕೂರುವುದರಿಂದ, ಕಾಲುಗಳನ್ನು ಹೆಚ್ಚು ಅಲುಗಾಡಿಸದೆ ಇರುವುದರಿಂದ ಕಾಲುಗಳಲ್ಲಿ ಊತ ಕಂಡು ಬರುತ್ತದೆ. ಅಂತಹ ಸಂದರ್ಭದಲ್ಲಿ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ. ಬೆರಳುಗಳು ಊದಿಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಮನೆಮದ್ದುಗಳನ್ನು ಪ್ರಯತ್ನಿಸದಿರಿ. ನೇರವಾಗಿ ವೈದ್ಯರ ಬಳಿಗೆ ತೆರಳಿ ಅವರು ಕೊಡುವ ಔಷಧ ಸೇವಿಸಿ.

ಕಾಲಿನಲ್ಲಿ ನೀರು ತುಂಬುವುದು ಅಥವಾ ಕಾಲು ವಿಪರೀತ ಊದಿಕೊಳ್ಳುವುದು ಕಿಡ್ನಿ ವೈಫಲ್ಯದ ಸಂಕೇತವಾಗಿರಬಹುದು. ಕಿಡ್ನಿಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಇಂಥ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಹೃದಯದ ಸಮಸ್ಯೆ ನಿಮಗಿದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಕಾಲು ದಪ್ಪಗಾಗಿದ್ದಾರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅಧಿಕ ರಕ್ತದೊತ್ತಡ ಇರುವವರು ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ.

ಇನ್ನು ಆಹಾರಪದ್ಧತಿಯಲ್ಲಿ ಉಪ್ಪಿನ ಅಂಶವನ್ನು ಕಡಿಮೆ ಸೇವನೆ ಮಾಡುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಹೊರಗಿನ ಆಹಾರ ಸೇವನೆಯನ್ನು ಕಡಿಮೆ ಮಾಡಿ. ಆನ್​ಲೈನ್​​ನಲ್ಲಿ ಎಲ್ಲವೂ ಮನೆಬಾಗಿಲಿಗೆ ಬರುವ ಈ ಕಾಲಘಟ್ಟದಲ್ಲಿ ರುಚಿಯಾದದ್ದು ಎಲ್ಲಾ ತಿಂದು ಆರೋಗ್ಯ ಹಾಳು ಮಾಡಿಕೊಳ್ಳದಿರಿ.

Spread the love

Related Articles

Leave a Reply

Your email address will not be published. Required fields are marked *

Back to top button