ಆರೋಗ್ಯಲೈಫ್ ಸ್ಟೈಲ್

ಆಲಿವ್ ಆಯಿಲ್ ನಲ್ಲಿದೆ ಉದ್ದ ಕೂದಲಿನ ಗುಟ್ಟು!

ಪವಿತ್ರಾ ಶೆಟ್ಟಿ

ಉದ್ದ ಕೂದಲನ್ನು ಹೊಂದಬೇಕು ಎಂಬುದು ನಿಮ್ಮದು ಬಹುಕಾಲದ ಬಯಕೆಯೇ? ಇದಕ್ಕೆ ಹಲವು ಶಾಂಪೂಗಳನ್ನು ಬಳಸಿ ಸೋತಿದ್ದೀರೇ. ಹಾಗಿದ್ದರೆ ಈ ಟಿಪ್ಸ್ ಅನ್ನು ಅನುಸರಿಸಿ ನೋಡಿ. ಕೆಲವೇ ತಿಂಗಳುಗಳಲ್ಲಿ ನಿಮ್ಮ ಕೂದಲು ದಪ್ಪವಾಗಿಯೂ ಉದ್ದವಾಗಿಯೂ ಬೆಳೆಯುವುದನ್ನು ನೀವೇ ನೋಡಿ.

ಅಡುಗೆ ಮನೆಯಲ್ಲಿ ಬಳಸುವ ಆಲಿವ್ ಎಣ್ಣೆ ದಟ್ಟ ಕೂದಲನ್ನು ಹೊಂದಲು ನೆರವಾಗುತ್ತದೆ. ಇದು ಕೂದಲು ಉದುರುವುದನ್ನು ಕಡಿಮೆ ಮಾಡಿ ಕೂದಲನ್ನು ಆಗದಂತೆ ನೋಡಿಕೊಳ್ಳುತ್ತದೆ. ತುದಿ ಒಡೆಯುವ ಸಮಸ್ಯೆಯನ್ನು ನಿವಾರಿಸುತ್ತದೆ. ಇದು ಎಲ್ಲಾ ವಯೋಮಾನದವರಿಗೂ, ಎಲ್ಲಾ ರೀತಿಯ ಕೂದಲಿನವರಿಗೂ ಹೊಂದಿಕೊಳ್ಳುತ್ತದೆ.

ಆಲಿವ್ ಆಯಿಲ್ ಬೆಳ್ಳುಳ್ಳಿ ಪೇಸ್ಟ್ ತಯಾರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ನಿಮ್ಮ ಕೂದಲಿಗೆ ಹಾಗೂ ತಲೆಗೆ ಸಂಪೂರ್ಣವಾಗಿ ಹಚ್ಚಿ 30 ನಿಮಿಷ ಬಿಡಿ. ಬಳಿಕ ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ. ಇದರಿಂದ ನಿಮ್ಮ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಕೂದಲು ರೇಷ್ಮೆಯಷ್ಟು ನುಣುಪಾಗುತ್ತದೆ.

ಆಲಿವ್ ಆಯಿಲ್ ಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ಬ್ಲೈಂಡ್ ಮಾಡಿ. ಇದನ್ನು ತಲೆಗೆ ಹಾಗೂ ನಿತ್ಯ ಭಾಗಕ್ಕೆ ಚೆನ್ನಾಗಿ ಹಚ್ಚಿಕೊಂಡು ಒಂದು ಗಂಟೆ ಹೊತ್ತು ಮಸಾಜ್ ಮಾಡಿ. ಬಳಿಕ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button