ಲೈಫ್ ಸ್ಟೈಲ್ಸೌಂದರ್ಯ

ಮನೆಯಲ್ಲೇ ಬ್ಲೀಚ್ ಮಾಡುವುದು ಹೇಗೆ…?

  • ಪವಿತ್ರಾ ಶೆಟ್ಟಿ

ಪ್ರತಿ ಬಾರಿ ನೀವು ಬ್ಯೂಟಿ ಪಾರ್ಲರ್ ಗೆ ಹೋಗಿ ಮುಖವನ್ನು ಬ್ಲೀಚ್ ಮಾಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಸಿಗುವ ಕೆಲವು ವಸ್ತುಗಳಿಂದ ಮುಖವನ್ನು ಬ್ಲೀಚ್ ಮಾಡಿಕೊಂಡರೆ ದುಡ್ಡು ಉಳಿಯುತ್ತದೆ, ನೈಸರ್ಗಿಕವಾಗಿ ಸೌಂದರ್ಯವು ವೃದ್ಧಿಯಾಗುತ್ತದೆ. ಅದನ್ನು ಮಾಡುವುದು ಹೇಗೆ ಎಂದಿರಾ.

ಮೊಸರಿನಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ತ್ವಚೆ ಬಣ್ಣ ಸುಧಾರಿಸುತ್ತದೆ. ಇದರಿಂದ ತ್ವಚೆಯ ತೇವಾಂಶ ಉಳಿಯುತ್ತದೆ. ದಪ್ಪವಾದ ಮೊಸರಿಗೆ ಒಂದು ಚಮಚ ಕಡಲೆಹಿಟ್ಟು ಮತ್ತು ಚಿಟಿಕೆ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಯ ಮೇಲೆ ಸಂಪೂರ್ಣವಾಗಿ ಹಚ್ಚಿ ನಿಧಾನಕ್ಕೆ ಸ್ಕ್ರಬ್ ಮಾಡಿ. 20 ನಿಮಿಷ ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ.

ಜೇನುತುಪ್ಪ ಹಾಗೂ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ಬಳಿಕ ಮುಖ ತೊಳೆದರೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.

ಸೌತೆಕಾಯಿ ರಸಕ್ಕೆ ಪುದೀನ ಎಲೆಗಳನ್ನು ಜಜ್ಜಿ ಹಾಕಿ ಪೇಸ್ಟ್ ತಯಾರಿಸಿ. ಇದಕ್ಕೆ ಎರಡು ಹನಿ ನಿಂಬೆರಸವನ್ನು ಸೇರಿಸಿ. ಇದನ್ನು ಮುಖಕ್ಕೆ ನಿಧಾನಕ್ಕೆ ಹಚ್ಚಿ, ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ನಿಮ್ಮ ತ್ವಚೆ ಸ್ವಚ್ಛವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button