ಆರೋಗ್ಯಲೈಫ್ ಸ್ಟೈಲ್

ತೂಕದ ಜೊತೆಗೆ ಹೃದಯದ ಆರೋಗ್ಯ ಕಾಪಾಡಲು ಈ ವ್ಯಾಯಾಮ ಮಾಡಿ

  • – ಪವಿತ್ರಾ

ಉತ್ತಮ ದೇಹ ಮತ್ತು ಮೈಕಟ್ಟು ನಮಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಜಿಮ್ ಗೆ ಹೋಗುವ ಬದಲು ಮನೆಯಲ್ಲಿಯೇ ಇಂತಹ ವ್ಯಾಯಾಮಗಳನ್ನು ಮಾಡಿ. ಕೆಲವು ಕಾರ್ಡಿಯೋ ವ್ಯಾಯಾಮಗಳು ತೂಕವನ್ನು ವೇಗವಾಗಿ ಕಳೆದುಕೊಳ್ಳುವಂತೆ ಮಾಡುವುದಲ್ಲದೇ ಇದು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಅಂತಹ ವ್ಯಾಯಾಮಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

-ಮೆಟ್ಟಿಲು ಹತ್ತುವುದು ಅತ್ಯುತ್ತಮ ಹೃದಯದ ವ್ಯಾಯಾಮವಾಗಿದೆ. ಇದು ಕೊಬ್ಬು ಮತ್ತು ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ. ಮೆಟ್ಟಿಲು ಹತ್ತುವಾಗ ಸ್ನಾಯುಗಳು ಹೆಚ್ಚು ಬಳಸಲಾಗುತ್ತದೆ. ಇದರಿಂದ ಕಾಲುಗಳು ಬಲಗೊಳ್ಳುತ್ತದೆ. ಹಾಗಾಗಿ ಪ್ರತಿದಿನ 10-15 ಬಾರಿ ಮೆಟ್ಟಿಲುಗಳನ್ನು ಹತ್ತುವ ಮತ್ತು ಇಳಿಯುವ ಅಭ್ಯಾಸ ಮಾಡಿ.

-ಕ್ಯಾಲೋರಿ ಮತ್ತು ಕೊಬ್ಬನ್ನು ಸುಡಲು ರನ್ನಿಂಗ್ ಉತ್ತಮ ವ್ಯಾಯಾಮವಾಗಿದೆ. ಓಡುವುದರಿಂದ ನಿಮ್ಮ ಹೆಚ್ಚುವರಿ ದೇಹದ ಕೊಬ್ಬು ಬಹಳ ವೇಗವಾಗಿ ಕಡಿಮೆಯಾಗುತ್ತದೆ.

-ಸ್ಕಿಪಿಂಗ್ ಕೂಡ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದೆ. ಇದು ಕ್ಯಾಲೋರಿಗಳನ್ನು ವೇಗವಾಗಿ ಸುಡುತ್ತದೆ. ಕಾಲು ಮತ್ತು ಭುಜಗಳನ್ನು ಬಲಪಡಿಸುತ್ತದೆ. ಇದನ್ನು ನೀವು ಯಾವುದೇ ಸಮಯದಲ್ಲಿ ಮಾಡಬಹುದು.

-ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬೈಸಿಕಲ್ ಉತ್ತಮ ಆಯ್ಕೆಯಾಗಿದೆ. ಇದು ಗಂಟೆಯಲ್ಲಿ 675 ಕ್ಯಾಲೋರಿಗಳನ್ನು ಸುಡಬಹುದು. ಇದು ನಿಮ್ಮ ದೇಹದ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ.

-ಈಜುವುದು ಕೂಡ ದೇಹದ ತೂಕವನ್ನು ನಿಯಂತ್ರಿಸುತ್ತದೆ. ಇದು ಸ್ನಾಯುಗಳಿಗೆ ಹೆಚ್ಚುವರಿ ಕೆಲಸಗಳನ್ನು ನೀಡುತ್ತದೆ. ಈಜುವುದರಿಂದ 14 ಕ್ಯಾಲೋರಿಗಳನ್ನು ಸುಡುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button