ಲೈಫ್ ಸ್ಟೈಲ್
ಮಳೆಗಾಲದಲ್ಲಿ ವಾರ್ಡ್ರೊಬ್ ನಲ್ಲಿ ಕಾಡುವಂತಹ ಫಂಗಸ್ ಸಮಸ್ಯೆಯನ್ನು ತಡೆಯಲು ಹೀಗೆ ಮಾಡಿ

- – ಪವಿತ್ರಾ
ಮಳೆಗಾಲದಲ್ಲಿ ವಾತಾವರಣ ತುಂಬಾ ತೇವಾಂಶದಿಂದ ಕೂಡಿರುವುದರಿಂದ ವಸ್ತುಗಳ ಮೇಲೆ ಫಂಗಸ್ ಮೂಡುತ್ತದೆ. ಇದರಿಂದ ಆ ವಸ್ತುಗಳು ಬಹಳ ಬೇಗನೆ ಹಾಳಾಗುತ್ತದೆ. ಇದರಿಂದ ವಾರ್ಡ್ರೋಬ್ ನಲ್ಲಿಟ್ಟ ಬಟ್ಟೆಗಳು ಕೂಡ ಹಾಳಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಸಲಹೆ ಪಾಲಿಸಿ.
-ಒದ್ದೆಯಾದ ಬಟ್ಟೆಗಳನ್ನು ವಾರ್ಡ್ರೊಬ್ ನಲ್ಲಿ ಇಡಬೇಡಿ. ವಾರ್ಡ್ರೊಬ್ ನಲ್ಲಿ ಇಡುವ ಮುನ್ನ ಬಟ್ಟೆ ಸಂಪೂರ್ಣವಾಗಿ ಒಣಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಈ ಒದ್ದೆ ಬಟ್ಟೆ ಫಂಗಸ್ ಮೂಡಲು ಕಾರಣವಾಗುತ್ತದೆ ಮತ್ತು ಜೊತೆಗೆ ಇತರ ಬಟ್ಟೆಗಳನ್ನು ಕೆಡಿಸುತ್ತವೆ.
- ವಾರ್ಡ್ರೊಬ್ ನಲ್ಲಿರುವ ಬಟ್ಟೆಗಳನ್ನು ಫಂಗಸ್ ನಿಂದ ರಕ್ಷಿಸಲು ಹಗಲಿನಲ್ಲಿ ಕಿಟಕಿಗಳನ್ನು ತೆರೆದಿಡಿ. ಸೂರ್ಯ ಬೆಳಕು, ತಾಜಾ ಗಾಳಿ ಮನೆಯೊಳಗೆ ಪ್ರವೇಶಿಸಲು ಅವಕಾಶ ಮಾಡಿ ಕೊಡಿ. ಇದರಿಂದ ಕೋಣೆಯಲ್ಲಿ ತೇವಾಂಶ ಕಡಿಮೆಯಾಗಿ ಫಂಗಸ್ ಸಮಸ್ಯೆ ಕಡಿಮೆಯಾಗುತ್ತದೆ.
- ವಾರ್ಡ್ರೊಬ್ ಅನ್ನು ಒದ್ದೆಯಾಗದಂತೆ ನೋಡಿಕೊಳ್ಳಿ. ವಾರ್ಡ್ರೊಬ್ ಅನ್ನು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಿ ಕರ್ಪೂರಗಳನ್ನು ಹಾಕಿ ಬಳಿಕ ಸರಿಯಾಗಿ ಒಣಗಿದ ಬಟ್ಟೆಗಳನ್ನು ಇಡಿ.
- ವಾರ್ಡ್ರೊಬ್ ಅನ್ನು ಗೋಡೆಗೆ ಹತ್ತಿರವಾಗಿ ಇಡಬೇಡಿ. ಮತ್ತು ತೇವಾಂಶ ಹೆಚ್ಚಾಗಿರುವ ಸ್ಥಳದಲ್ಲಿ ಇಡಬೇಡಿ. ಇದರಿಂದ ವಾರ್ಡ್ರೊಬ್ ನಲ್ಲಿ ತೇವಾಂಶ ಹೆಚ್ಚಾಗಿ ಫಂಗಸ್ ಬೆಳೆಯುತ್ತದೆ. ನೆಲದ ತೇವಾಂಶದಿಂದ ವಾರ್ಡ್ರೊಬ್ ನಲ್ಲಿರುವ ಬಟ್ಟೆ ಹಾಳಾಗಬಾರದಂತಿದ್ದರೆ ವಾರ್ಡ್ರೊಬ್ ಅನ್ನು ಮರದ ಹಲಗೆಯ ಮೇಲೆ ಇರಿಸಿ.




