ಆರೋಗ್ಯಲೈಫ್ ಸ್ಟೈಲ್
ಅನಿಯಮಿತ ಮುಟ್ಟಿಗೆ ಇದೆ ಮನೆಮದ್ದು

ಪವಿತ್ರಾ
ಮುಟ್ಟಾಗುವುದು ಒಂದು ನೈಸರ್ಗಿಕ ಕ್ರಿಯೆ. ಆದರೆ ಕೆಲವೊಮ್ಮೆ ಅನಿಯಮಿತ ಮುಟ್ಟು ಹಲವು ಕಿರಿಕಿರಿಗಳನ್ನು ಹುಟ್ಟುಹಾಕುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ಅಂದರೆ ನಿಯಮಿತವಾಗಿ ಮುಟ್ಟಾಗುವಂತೆ ಮಾಡಲು ಕೆಲವು ವಸ್ತುಗಳನ್ನು ನೀವು ಸೇವಿಸುತ್ತಿರುವುದು ಬಹಳ ಮುಖ್ಯ.
ಕಾಯಿ ಪಪ್ಪಾಯಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಹೊಟ್ಟೆಯ ಸ್ನಾಯುಗಳ ನರಗಳನ್ನು ಸಡಿಲಗೊಳಿಸುತ್ತದೆ. ಮುಟ್ಟಿನ ಸಮಯದಲ್ಲಿ ಹೊರತುಪಡಿಸಿ ಉಳಿದಂತೆ ಇದನ್ನು ಸೇವಿಸಬಹುದು.
ಹಾಲು ಕುಡಿಯುವಾಗ ಅದಕ್ಕೆ ಚಿಟಿಕೆ ಅರಿಶಿನಪುಡಿ ಬೆರೆಸಿ ಕುಡಿಯುವುದರಿಂದಲೂ ನಿಯಮಿತವಾಗಿ ಮುಟ್ಟಾಗುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹಾರ್ಮೋನುಗಳಲ್ಲಿ ಸಮಸ್ಯೆಯಿಂದ ಹೊರಬರಲು ನಿತ್ಯ ವ್ಯಾಯಾಮ ಹಾಗೂ ಧ್ಯಾನದಲ್ಲಿ ತೊಡಗಿಕೊಳ್ಳುವುದು ಬಹಳ ಮುಖ್ಯ. ಅಲೋವೆರಾ ಜೆಲ್ ಅನ್ನು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.




