ಅರುಣಾ ಕುಮಾರಿ ವಿಷಯಕ್ಕೆ ದರ್ಶನ್ ಸ್ಪಷ್ಟನೆ

ನಕಲಿ ದಾಖಲೆ ಸೃಷ್ಟಿ ಮಾಡಿ ನಟ ದರ್ಶನ್ ಕಡೆಯಿಂದ ಶ್ಯೂರಿಟಿ ಕೇಳಿದ್ದ ಅರುಣಾ ಕುಮಾರಿ ವಿಷಯಕ್ಕೆ ಪತ್ರಿಕಾಗೋಷ್ಠಿ ಕರೆದು ಖುದ್ದು ದರ್ಶನ್ ಅವರೇ ವಿವರ ನೀಡಿದ್ದಾರೆ. ಇದೊಂದು ಪ್ರೀ ಪ್ಲಾನ್ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಈ ವಿಷಯದಲ್ಲಿ ಸ್ನೇಹಿತರಾದ ರಾಕೇಶ್ ಮತ್ತು ಹರ್ಷ ಅವರ ಹೆಸರು ಕೇಳಿಬರುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ ದರ್ಶನ್!
‘ಉಮಾಪತಿ ಅವರಿಗೇ ಬಿಟ್ಟಿದ್ದೇನೆ’
ವಿಚಾರಣೆ ವೇಳೆ ಅರುಣಾ ಕುಮಾರಿ ಅವರು ಇದಕ್ಕೆಲ್ಲಾ ಕಾರಣ ಉಮಾಪತಿ ಅವರೇ. ಅವರೇ ಎಲ್ಲಾ ಮಾಡಿಸಿದ್ದು ಎಂದಿದ್ದು, ಆ ವಿಷಯಕ್ಕೆ ಉಮಾಪತಿ ಅವರಿಗೆ ಕ್ಲಾರಿಟಿ ಕೂಡಿ. ನಮ್ಮನ್ನ ಮೀರಿ ಇನ್ಯಾರೋ ಇದ್ದಾರಾ ಅಂತ ಪರಿಶೀಲನೆ ಮಾಡಿ ಎಂದಿದ್ದೇನೆ. ಅವರಿಗೂ ಅರುಣಾ ಕುಮಾರಿ ಅವರಿಗೂ ಮೊದಲಿನಿಂದ ಪರಿಚಯ ಇತ್ತು. ಅದಕ್ಕೆ ನಮ್ಮ ಬಳಿ ಅವರಿಬ್ಬರ ವಾಟ್ಸಾಪ್ ಚಾಟ್ ಸಾಕ್ಷಿ ಇದೆ. ಅವರಿಬ್ಬರೂ ಎಪ್ರಿಲ್ ನಿಂದ ಚಾಟ್ ಮಾಡಿದ್ದಾರೆ. ಆದರೆ ಉಮಾಪತಿ ಇತ್ತೀಚೆಗೆ ಅಷ್ಟೇ ಪರಿಚಯ ಎಂದಿದ್ದರು. ಈ ಕಾರಣಕ್ಕೆ ಉಮಾಪತಿ ಅವರಿಗೆ ನೀವೇ ಇದನ್ನು ಬಗೆಹರಿಸಿ ಎಂದಿದ್ದೇನೆ ಅಂತ ದರ್ಶನ್ ಸ್ಪಷ್ಟವಾಗಿ ತಿಳಿಸಿದ್ದಾರೆ!
‘ಅರುಣಾ ಬ್ಯಾಂಕ್ ಉದ್ಯೋಗಿಯೇ ಅಲ್ಲ’
ಅಸಲಿಗೆ ಡುಪ್ಲಿಕೇಟ್ ಬ್ಯಾಂಕ್ ಮ್ಯಾನೇಜರ್ ಅಂತ ಹೇಳಿಕೊಂಡು ಬಂದಿರುವ ಅರುಣಾ ಓದಿದ್ದೇ ಪಿಯುಸಿ ಅಷ್ಟು. ವಿಚ್ಛೇದಿತ ಮಹಿಳೆಯಾಗಿರೋ ಅರುಣಾ ಕುಮಾರಿ ಹಿಂದೆ ಯಾರಿದ್ದಾರೆ ಅಂತ ಗೊತ್ತಾಗಬೇಕಿದೆ. ಅದರ ತನಿಖೆ ನಡೆಯುತ್ತಿದೆ. ಆದರೆ ಈ ವಿಷಯದಲ್ಲಿ ನನ್ನ ಇತರ ಮಿತ್ರರ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದಿದ್ದಾರೆ.



