ಆರೋಗ್ಯಲೈಫ್ ಸ್ಟೈಲ್
ಕಾಲಿನ ಸೆಳೆತ ಏಕೆ? ಹೇಗೆ?

ಪವಿತ್ರಾ
ಹಲವು ಮಂದಿಯನ್ನು ಕಾಡುವ ಸಮಸ್ಯೆಗಳಲ್ಲಿ ಕಾಲು ಸೆಳೆತವೂ ಒಂದು. ರಾತ್ರಿಯ ನಿದ್ದೆಯನ್ನು ಹಾಳು ಮಾಡುವ ಕಾಲು ಸೆಳೆತಕ್ಕೆ ಈ ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಬಹುದು.
ವಿಪರೀತ ನಡೆಯುವುದರಿಂದ ಆಟವಾಡುವುದರಿಂದ ದೈಹಿಕ ಶ್ರಮದ ಕೆಲಸ ಮಾಡುವುದರಿಂದ ಕಾಲ ಸೆಳೆತ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರಾತ್ರಿ ಮಲಗುವ ಮುನ್ನ ಹತ್ತು ನಿಮಿಷ ಉಗುರು ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಅದರಲ್ಲಿ ಕಾಲಿಟ್ಟು ಕುಳಿತುಕೊಳ್ಳಿ. ನಂತರ ಕಾಲನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಹರಳೆಣ್ಣೆ ಅಥವಾ ಯಾವುದೇ ನೋವಿನ ಎಣ್ಣೆ ಲಘುವಾಗಿ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕಾಲಿನ ಸೆಳೆತ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಶುಂಠಿ ಚಹಾ ತಯಾರಿಸಿ ಕುಡಿಯಿರಿ. ಇದಕ್ಕೆ ನೋವು ನಿವಾರಣೆ ಮಾಡುವ ಗುಣವಿದೆ.
ಕಾಲಿನ ಸೆಳೆತ ಉಂಟಾಗಲು ಇನ್ನೊಂದು ಮುಖ್ಯ ಕಾರಣ ಎಂದರೆ ನಿಶಕ್ತಿ. ಹೆಚ್ಚಿನ ಒಣ ಹಣ್ಣುಗಳನ್ನು ಸೇವಿಸುವ ಮೂಲಕ, ತಾಜಾ ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನಿಮ್ಮ ದೇಹವನ್ನು ಬಲಿಷ್ಠಗೊಳಿಸಿ.




