Yogasana: ಸೌಂದರ್ಯ ಹೆಚ್ಚಿಸುವ ಆಸನಗಳಿವು

– ಪವಿತ್ರಾ ಶೆಟ್ಟಿ
ಯೋಗಾಸನದ ಮೂಲಕ ನೀವು ದೇಹದ ಆರೋಗ್ಯ ಮಾತ್ರವಲ್ಲ ತ್ವಚೆ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅಂಥ ಕೆಲವು ಆಸನಗಳ ಬಗ್ಗೆ ತಿಳಿಯೋಣ.
ಯೋಗಮುದ್ರ ಆಸನವನ್ನು ವ್ಯಕ್ತಿಯ ಮಾಡುವುದರಿಂದ ನಿಮ್ಮ ಮುಖದ ಮೇಲಿನ ವಯಸ್ಸಾದ ಲಕ್ಷಣಗಳು ನಿಧಾನಕ್ಕೆ ಮೊದಲು ಸುಖಾಸನದಲ್ಲಿ ಕುಳಿತುಕೊಂಡು ಎರಡು ಕೈಗಳನ್ನು ಹಿಂದಿ ತೆಗೆದುಕೊಂಡುಹೋಗಿ ಎಡಕೈಯನ್ನು ಬಲಕೈಯಿಂದ ಹಿಡಿಯಿರಿ. ಉಸಿರನ್ನು ಹೊರಹಾಕುತ್ತಾ ಭುಜಗಳನ್ನು ಹಿಂದಕ್ಕೆ ಬಾಗಿಸಿ ಹಾಗೂ ಎದೆಯನ್ನು ಉಸಿರನ್ನು ಬಿಡುತ್ತಾ ಮುಂದಕ್ಕೆ ಸಾಧ್ಯವಾದರೆ ಹಣೆಯನ್ನು ಬಲ ಮೊಣಕಾಲಿಗೆ ಮತ್ತೆ ಉಸಿರು ಒಳಗೆ ತೆಗೆದುಕೊಳ್ಳುತ್ತಾ ಮೊದಲಿನ ಭಂಗಿಗೆ ಬನ್ನಿ. ಇದನ್ನು ಪುನರಾವರ್ತಿಸಿ.
ಕಪಲ ರಂದ್ರ ಧೌತಿ ಯೋಗ: ಈ ಆಸನವನ್ನು ನಿಯಮಿತವಾಗಿ ಮಾಡುವುದರಿಂದ ಯಾವುದೇ ರಾಸಾಯನಿಕಯುಕ್ತ ಫೇಶಿಯಲ್ ಮಸಾಜ್ ಗಳನ್ನು ನೀವು ಮಾಡಿಸಿಕೊಳ್ಳಬೇಕಿಲ್ಲ. ಇದು ತ್ವಚೆಗೆ ಸಹಜ ಸೌಂದರ್ಯವನ್ನು ನೀಡುತ್ತದೆ ಹಾಗೂ ದೇಹಕ್ಕೆ ಆರಾಮ ನೀಡಿ ಉತ್ತಡವನ್ನು ಕಡಿಮೆಮಾಡುತ್ತದೆ.
ಮೊದಲಿಗೆ ನಿಮ್ಮ ಬೆರಳುಗಳಿಂದ ನಿಧಾನವಾಗಿ ಹಣೆಗೆ ಮಸಾಜ್ ಮಾಡಿ. ಮೊದಲಿಗೆ ಇದನ್ನು ಹಣೆಯ ಮಧ್ಯದಿಂದ ಆರಂಭಿಸಿ ಕಣ್ಣಿನ ಅಂಚು ಗಳವರೆಗೆ ಮುಂದುವರೆಯಿರಿ. ಒಂದು ಬೆರಳಿನ ಸಹಾಯದಿಂದ ಹುಬ್ಬುಗಳನ್ನು ಹಾಗೆ ಎಳೆಯಿರಿ. ಕಣ್ಣುಗಳ ಸುತ್ತಲೂ ಮಸಾಜ್ ಮಾಡಿ. ಗಲ್ಲದ ಮೇಲ್ಭಾಗವನ್ನು ಮೃದುವಾಗಿ ತಿಕ್ಕಿ ಮಸಾಜ್ ಮಾಡಿ. ಅದೇ ರೀತಿ ಕುತ್ತಿಗೆಯ ಮೇಲ್ಭಾಗದ ತನಕ ಮುಂದುವರೆಯಿರಿ.




