Digestive: ಪದೇ ಪದೇ ಕಾಣಿಸಿಕೊಳ್ಳುವ ಅಜೀರ್ಣ ಸಮಸ್ಯೆಗೆ…

ಅಜೀರ್ಣ ಸಮಸ್ಯೆಗೆ ಪ್ರತಿಬಾರಿ ವೈದ್ಯರ ಬಳಿ ತೆರಳಿ ಔಷಧ ತರಬೇಕಿಲ್ಲ. ಊಟವಾದ ಬಳಿಕ ನಿತ್ಯ ನೀವು ಕೆಲವು ಯೋಗಾಸನಗಳನ್ನು ಮಾಡುವ ಮೂಲಕ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಅಜೀರ್ಣ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಅವುಗಳ ಪೈಕಿ ವಜ್ರಾಸನ ಮೊದಲನೆಯದಾಗಿರಲಿ. ಮೊದಲು ನೀವು ನೇರವಾಗಿ ನಿಂತುಕೊಳ್ಳೆ ನಿಧಾನವಾಗಿ ಮುಂದಕ್ಕೆ ಬಗ್ಗಿ ಮೊಣಕಾಲನ್ನು ನೆಲದ ಮೇಲಿಡಿ. ನಿಮ್ಮ ಪೃಷ್ಠದ ಭಾಗ ಹಿಂಗಾಲುಗಳ ಮೇಲೆ ಬರುವಂತೆ ಕುಳಿತುಕೊಳ್ಳಿ. ಇದು ಎಷ್ಟು ಸಾಧ್ಯವೋ ಅಷ್ಟು ಬಿಗಿಯಾಗಿರಲಿ. ಪಾದಗಳ ಮಧ್ಯೆ ಸ್ವಲ್ಪ ಅಂತರವಿರಲಿ. ಬೆನ್ನನ್ನು ನೇರವಾಗಿಡಿ ಮತ್ತು ನಿಮ್ಮ ದೃಷ್ಟಿ ಮುಂದಕ್ಕೆ ನೇರವಾಗಿರಲಿ. ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಈ ಆಸನದಲ್ಲಿ ಕುಳಿತುಕೊಳ್ಳಿ. ಮೊಣಕಾಲು ಅಥವಾ ಇತರ ಕಾಲಿನ ಸಮಸ್ಯೆ ಇರುವವರು ಈ ವ್ಯಾಯಾಮ ಮಾಡದಿರಿ.
ಇದರ ಹೊರತಾಗಿ ಸುಖಾಸನ ದಿಂದಲೂ ನಿಮ್ಮ ಅಲರ್ಜಿ ಸಮಸ್ಯೆಯನ್ನು ದೂರ ಮಾಡಬಹುದು. ಊಟವಾದ ತಕ್ಷಣ ಮಲಗುವುದು ಕೂಡ ಅಜೀರ್ಣ ಸಮಸ್ಯೆಗೆ ಕಾರಣವಾಗುತ್ತದೆ. ಅದರ ಬದಲು 20 ನಿಮಿಷ ವಾಕಿಂಗ್ ಮಾಡಿ. ಇದರಿಂದ ದೇಹಕ್ಕೆ ವ್ಯಾಯಾಮ ಸಿಗುವ ಜೊತೆಗೆ ಮಲಬದ್ಧತೆ ಸಮಸ್ಯೆಯೂ ನಿವಾರಣೆಯಾಗುತ್ತದೆ.




