ಆಹಾರಲೈಫ್ ಸ್ಟೈಲ್

ಅಂಜೂರದ ಹಲ್ವಾ ಮನೆಯಲ್ಲೇ ಮಾಡಿ ರುಚಿ ನೋಡಿ

ಡ್ರೈ ಫ್ರೂಟ್ಸ್ ಗಳು ಆರೋಗ್ಯಕ್ಕೆ ಅತ್ಯುತ್ತಮ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಇವುಗಳನ್ನ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆರೋಗ್ಯದ ಜೊತೆಗೆ ನಾಲಿಗೆಗೆ ರುಚಿ ನೀಡುವ ಈ ಒಣ ಹಣ್ಣುಗಳು ಸಾಕಷ್ಟು ವೆರೈಟಿಯಲ್ಲಿ ಸಿಗುತ್ತವೆ. ಹಾಗಾದ್ರೆ ಇವತ್ತು ಒಣಹಣ್ಣುಗಳಲ್ಲಿ ಒಂದಾಗಿರೋ ಅಂಜೂರ ಬಳಿಸಿ ಹಲ್ವಾ ಮಾಡೋದು ಹೇಗೆ ಅನ್ನೋದನ್ನ ತಿಳಿದುಕೊಳ್ಳೋಣ.

ಅಂಜೂರ ಹಣ್ಣಿನ ಹಲ್ವಾ ಮಾಡೋಕೆ ಬೇಕಾಗುವ ಸಾಮಗ್ರಿಗಳು

ಒಂದು ಬೌಲ್ ನೆನೆ ಹಾಕಿದ ಅಂಜೂರ

ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ

ಸ್ವಲ್ಪ ಹಾಲು

ಮೂರು ಏಲಕ್ಕಿ, ಸ್ವಲ್ಪ ದ್ರಾಕ್ಷಿ, ಗೋಡಂಬಿ, ಪಿಸ್ತಾ

ತುಪ್ಪ ಮೂರು ಚಮಚ

ಮೊದಲಿಗೆ ಒಂದು ಬಾಣಲೆಯಲ್ಲಿ ತುಪ್ಪವನ್ನ ಹಾಕಿ, ತುಪ್ಪ ಬಿಸಿ ಆದ ಬಳಿಕ ಅದಕ್ಕೆ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಗೂ ಪಿಸ್ತಾ ಹಾಕಿ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಬಳಿಕ ಮೊದಲೇ ನೆನೆಸಿಟ್ಟ ಅಂಜೂರ ಹಣ್ಣನ್ನು ಹಾಕಿ ಚೆನ್ನಾಗಿ ಬೆರೆಸಿ. ಸ್ವಲ್ಪ ಹಾಲು ಹಾಕಿ ಚೆನ್ನಾಗಿ ಬೇಯಲು ಬಿಡಿ. ಅಂಜೂರ ಹಾಗೂ ಹಾಲು ಚೆನ್ನಾಗಿ ಬೆಂದ ಬಳಿಕ ಬೇಕಾದಷ್ಟು ಸಕ್ಕೆರೆ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಅಂಜೂರ ಹಾಗೂ ಸಕ್ಕರೆ ಮಿಶ್ರವಾಗಿ ದಪ್ಪನೆಯ ಸ್ಥಿತಿಗೆ ಬರುವ ತನಕ ಬೇಯಿಸಿ. ಬಳಿಕ ಹುರಿದಿಟ್ಟುಕೊಂಡಿದ್ದ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಗೂ ಪಿಸ್ತಾ ಹಾಕಿ ಸವಿಯಲು ನೀಡಿ.

Related Articles

Leave a Reply

Your email address will not be published. Required fields are marked *

Back to top button