Breaking NewsLatestಮೆಟ್ರೋರಾಜ್ಯಸುದ್ದಿ

ಸಿಲಿಕಾನ್ ಸಿಟಿಯಲ್ಲಿ ತರಕಾರಿ ಬೆಲೆ ಗಗನಕ್ಕೆ, ಎಷ್ಟೆಷ್ಟು ಗೊತ್ತಾ?

ಬೆಂಗಳೂರು: ಯುಗಾದಿ ಹಬ್ಬದ ಪ್ರಯುಕ್ತ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ನಗರದ ಮಾರುಕಟ್ಟೆಗಳಲ್ಲಿ ಯುಗಾದಿ ಖರೀದಿ ಅಬ್ಬರ ಭರದಿಂದ ಸಾಗುತ್ತಿದೆ. ಹಬ್ಬದ ವಸ್ತುಗಳನ್ನು ಕೊಳ್ಳಲು ಜನ ಬ್ಯುಸಿಯಾಗಿದ್ದಾರೆ. ಈ ಬಾರಿ ಯುಗಾದಿ ಹಬ್ಬವನ್ನು ಜನತೆ ಸಡಗರದಿಂದ ಆಚರಿಸುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಹಬ್ಬಕ್ಕೆ ಮತ್ತೆ ಕಳೆ ಬಂದಿದೆ. ಈ ಮಧ್ಯೆ, ಕಳೆದ ಮೂರು ದಿನಕ್ಕೆ ಹೋಲಿಸಿದರೆ ಇಂದು ಕೊಂಚ ದರ ಏರಿಕೆ ಆಗಿದೆ. ಯುಗಾದಿ ಹಬ್ಬದ ಹಿನ್ನೆಲೆ ಹೂವು, ಹಣ್ಣು ಬೆಲೆಗಳ ದರದಲ್ಲಿ ಏರಿಕೆಯಾಗಿದೆ. ಹಣ್ಣುಗಳಲ್ಲಿ 20 ರಿಂದ 30 ರೂಪಾಯಿ ಏರಿಕೆ ಆಗಿದ್ದರೆ ಹೂವುಗಳಲ್ಲಿ 30 ರಿಂದ 40 ರೂಪಾಯಿ ಹೆಚ್ಚಳವಾಗಿದೆ.

ಚಾಂದ್ರಮಾನ ಯುಗಾದಿ ಹಬ್ಬ ಇರುವ ಹಿನ್ನೆಲೆ ಹಬ್ಬವನ್ನು ಧಾರ್ಮಿಕ ಹಬ್ಬವನ್ನಾಗಿ ಆಚರಿಸಲು ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ಧರಿಸಿದೆ. ಈ ಹಿನ್ನೆಲೆ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ವಿಶೇಷ ಪೂಜೆ ಇರಲಿದೆ. ಭಕ್ತಾದಿಗಳಿಗೆ ಉಚಿತವಾಗಿ ಬೇವು ಬೆಲ್ಲ, ಪಾನಕ ಮಜ್ಜಿಗೆ ಜೊತೆ ತೀರ್ಥ ಪ್ರಸಾದವೂ ನೀಡುವ ವ್ಯವಸ್ಥೆ ಮಾಡಲಾಗಿದೆ.

ಯುಗಾದಿ ಅಗತ್ಯ ವಸ್ತುಗಳ ಬೆಲೆ ಹೀಗಿದೆ:

–ಮಾವಿನ ಎಲೆ 10 ರೂ./ ಕಟ್ಟು
–ಬೇವಿನ ಸೊಪ್ಪು 20 ರೂ./ ಕಟ್ಟು
–ತುಳಸಿ ತೋರಣ 50 ರೂ./ ಮಾರು
–ಬೆಲ್ಲ (ಅಚ್ಚು/ಉಂಡೆ) 50- 60 ರೂ./ kg

ಇಂದಿನ ಹೂವುಗಳ ಬೆಲೆ :

– ಮಲ್ಲಿಗೆ ಮೊಗ್ಗು 200 ರೂ./ kg
– ಸೇವಂತಿಗೆ 140 ರೂ./ kg
– ಕನಕಾಂಬರ 300 ರೂ./ kg
– ಸುಗಂಧರಾಜ 60 ರೂ./ kg
– ಗುಲಾಬಿ 100 ರೂ./ kg
– ಚೆಂಡು ಹೂವು 40 ರೂ./ kg

ಇಂದಿನ ಹಣ್ಣುಗಳ ಬೆಲೆ :

– ಸೇಬು 160 ರೂ./ kg
– ದಾಳಿಂಬೆ 250 ರೂ./ kg
– ಮೂಸಂಬಿ 100 ರೂ./ kg
– ಆರೆಂಜ್ 120 ರೂ./ kg
– ಸಪೋಟ 100 ರೂ./ kg
– ಸೀಬೆಹಣ್ಣು 120 ರೂ./ kg
– ಏಲಕ್ಕಿ ಬಾಳೆಹಣ್ಣು 70 ರೂ./ kg
– ದ್ರಾಕ್ಷಿ 100-120 ರೂ./ kg

Spread the love

Related Articles

Leave a Reply

Your email address will not be published. Required fields are marked *

Back to top button