Latestಮನರಂಜನೆಸಿನಿಮಾ

ಪ್ರಭಾಸ್ ಕಂಡಿದ್ದ ಕನಸು ನನಸು; ಏನದು ಗೊತ್ತಾ?

ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಮತ್ತು ಹಾಡುಗಳಿಂದಲೆ ಸಾಕಷ್ಟು ಸದ್ದು ಮಾಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗಾಗಲೆ ಈ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾಟದಿಂದ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲಾಗಿದೆ. ಈ ನಡುವೆಯೇ ಪ್ರಭಾಸ್ ಮತ್ತೊಂದು ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಹೌದು ಬಾಹುಬಲಿ ಪ್ರಭಾಸ್ ಅವರು ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ಬಣ್ಣ ಹಚ್ಚಲಿದ್ದಾರೆ. ಬಿಗ್ ಬಿ ಜೊತೆ ಇದೇ ಮೊದಲ ಬಾರಿಗೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಸಿನಿಮಾದಲ್ಲಿ ನಟಿಸಲಿದ್ದಾರೆ.

ಈ ಚಿತ್ರದ ಮೊದಲ ದಿನದ ಚಿತ್ರೀಕರಣ ಇತ್ತೀಚೆಗೆ ನಡೆದಿದೆ. ಈ ಬಗ್ಗೆ ಅಮಿತಾಬ್ ಮತ್ತು ಪ್ರಭಾಸ್ ಇಬ್ಬರೂ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಬಿಗ್ ಬಿ ಸಿನಿಮಾ ಫೋಟೊ ಹಂಚಿಕೊಂಡ ಪ್ರಭಾಸ್, ಕನಸು ನನಸಾಗಿದೆ. ಲೆಜೆಂಡರಿ ಅಮಿತಾಬ್ ಬಚ್ಚನ್ ಸರ್ ಅವರೊಂದಿಗೆ ನನ್ನ ಮೊದಲ ಶಾಟ್. ಇಂದು ಪೂರ್ಣಗೊಂಡಿದೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಈ ಕುರಿತು ನಿನ್ನೆ ಬಚ್ಚನ್ ಸಹ ಸೋಶಿಯಲ್ ಮೀಡಿಯಾದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ತಮ್ಮ ಮೊದಲ ದೃಶ್ಯವನ್ನು ಚಿತ್ರೀಕರಿಸಲಾಗಿದೆ ಎಂದು ಬಹಿರಂಗಪಡಿಸಿದರು. ಟ್ವೀಟ್‍ನಲ್ಲಿ ಬಿಗ್ ಬಿ, ಮೊದಲ ದಿನ.. ಮೊದಲ ಶಾಟ್.. ‘ಬಾಹುಬಲಿ’ ಪ್ರಭಾಸ್ ಅವರೊಂದಿಗಿನ ಮೊದಲ ಚಿತ್ರ. ಅವರ ಪ್ರತಿಭೆ ಮತ್ತು ನಮ್ರತೆ, ಕಲಿಯಲು ತೊಡಗಿಸಿಕೊಳ್ಳಲು ಅವರಿಗಿರುವ ಕಾತುರತೆ ತುಂಬಾ ಚೆನ್ನಾಗಿದೆ ಎಂದು ಬರೆದು ಟ್ವೀಟ್ ಮಾಡಿದರು.

ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಇನ್ನು ನಾಗ್‍ಅಶ್ವಿನ್ ಆಕ್ಷನ್ ಕಟ್ ಹೇಳುತ್ತಿದ್ದು, ‘ವೈಜಯಂತಿ ಮೂವೀಸ್’ ಸಿನಿಮಾವನ್ನು ನಿರ್ಮಿಸುತ್ತಿದೆ.

Spread the love

Related Articles

Leave a Reply

Your email address will not be published. Required fields are marked *

Back to top button