Breaking NewsLatest

ಹಿಜಾಬ್​​ – ಕೇಸರಿ ನಡುವೆ ಬಿಂದಿ ಚಳುವಳಿ ಅಭಿಯಾನ

ಕಲಬುರ್ಗಿ : ಹಿಜಾಬ್​​​​ -ಕೇಸರಿ ವಿವಾದದ ಜೊತೆಗೆ ಇದೀಗ ಬಿಂದಿ ಚರ್ಚೆ ಮುನ್ನೆಲೆಗೆ ಬಂದಿದೆ. ಹಿಜಾಬ್​​​​​ ವಿರೋಧಿಸುವ ಕಲಬುರ್ಗಿಯ ಹಿಂದೂಪರ ಸಂಘಟನೆಗಳ ಮಹಿಳಾ ಮುಖಂಡರು ಸಿಂಧೂರ ಚಳುವಳಿ ಅಭಿಯಾನ ಆರಂಭಿಸಿದ್ದಾರೆ.

ಹಿಂದೂಪರ ಸಂಘಟನೆ ಕಾರ್ಯಕರ್ತೆ ದಿವ್ಯಾ ಹಾಗರಗಿ ಅವರ ನೇತ್ರತ್ವದಲ್ಲಿ ಸಿಂಧೂರ ಚಳುವಳಿ ಆರಂಭಿಸಲಾಗಿದೆ. ಬಿಂದಿ ಹಾಕಿಕೊಂಡು ಶಾಲೆಗೆ ಬರುತ್ತಿರಲ್ಲ ಅನ್ನೊ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಗಳ ಪ್ರಶ್ನೆಗೆ ಆಕ್ರೋಶಗೊಂಡ ಹಿಂದೂಪರ ಸಂಘಟನೆ ಮಹಿಳೆಯರು ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಶಿಣ- ಕುಂಕುಮ ಹಚ್ಚಿ, ಬಳೆ ಕೊಟ್ಟು ವಿನೂತನವಾಗಿ ಸಿಂಧೂರ ಚಳುವಳಿಯನ್ನು ನಡೆಸಿದರು.

ಇದೇ ವೇಳೆ ಮಾತನಾಡಿದ ಹಿಂದೂಪರ ಸಂಘಟನೆ ಕಾರ್ಯಕರ್ತೆ ದಿವ್ಯಾ ಹಾಗರಗಿ, ಕುಂಕುಮ ತಂಟೆಗೆ ಬಂದ್ರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವಾ ಆಗಬೇಕಾಗುತ್ತದೆ. ಅರಶಿಣ, ಕುಂಕುಮ, ಹೂವು, ಬಳೆ, ಮಹಿಳೆಯರು ಮುಡಿಯೋದು ನಮ್ಮ ಹಿಂದು ಸಂಪ್ರದಾಯ. ಹೀಗಾಗಿ ಸಿಂಧೂರ ಚಳುವಳಿ ಆರಂಭ ಮಾಡಿದ್ದೇವೆ. ಭಾರತ ಹಿಂದು ರಾಷ್ಟ್ರ, ಅರಶಿಣ, ಕುಂಕುಮ, ಕೇಸರಿ ಶಾಲು ನಮ್ಮ ಸಂಪ್ರದಾಯ, ಹಿಜಾಬ್​​​​​​​​ ವಿಷಯ ಕೋರ್ಟ್​​​ ನಲ್ಲಿದೆ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button