ಬೈ ಟು ಲವ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ; ನಿರ್ದೇಶಕ ಹರಿ ಸಂತೋಷ ಸಂತಸ

ಹುಬ್ಬಳ್ಳಿ: ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್‌ನಡಿ ವೆಂಕಟ್ ಕೊನಂಕಿ ನಿರ್ಮಾಣ ಮಾಡಿರುವ, ಬೈ ಟು ಲವ್ ಸಿನಿಮಾ ಬಿಡುಗಡೆಯಾಗಿ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇನ್ನೂ ಯಾರಿಗೆಲ್ಲ ಚಿತ್ರ ವೀಕ್ಷಣೆ ಮಾಡಲು ಆಗಿಲ್ಲ ಅವರೆಲ್ಲರೂ ಚಿತ್ರಮಂದಿರಕ್ಕೆ ಹೋಗಿ ಆರ್ಶಿವಾದ ಮಾಡಬೇಕು ಎಂದು ಚಿತ್ರದ ನಿರ್ದೇಶಕ ಹರಿ ಸಂತೋಷ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದ ಪ್ರೇಮ ಕಹಾನಿಗೆ ಸಿನಿ ಪ್ರೀಯರು ಮೆಚ್ಚಿಗೆ ನೀಡುತ್ತಿದ್ದಾರೆ. ಚಿತ್ರದಲ್ಲಿ ಒಟ್ಟು ೪ ಹಾಡುಗಳನ್ನು ಒಳಗೊಂಡಿದ್ದು, ಎಲ್ಲಾ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿವೆ. ನಮ್ಮ ಸಿನಿ ಪ್ರಿಯರ ಮನದಲ್ಲಿ ಹಾಗೂ ಧ್ವನಿಯಲ್ಲಿ ಹಾಡು ಕೇಳಿ ಬರುತ್ತಿವೆ ಎಂದರು.
ಚಿತ್ರದ ನಾಯಕ ನಟ ಧನ್ವೀರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದು, ಶ್ರೀಲೀಲಾ ಅವರು ಮಲೆನಾಡು ಹುಡ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ರಾಜ್ಯಾದ್ಯಂತ ಉತ್ತಮ ಪ್ರದರ್ಶನಗೊಳ್ಳುತ್ತಿದೆ ಎಂದರು. ಮಾಸ್ ಚಿತ್ರದಿಂದ ಲವರ್ ಬಾಯ್ ಆಗಿ ಅಭಿನಯಿಸಿದ್ದು, ಚಾಲೆಂಗ್ ಆಗಿ ಅನಿಸಿತು. ಈಗ ಲವರ್ ಬಾಯ್‌ಗೆ ನಮ್ಮ ಸಿನಿ ಪ್ರೇಮಿಗಳು ಆರ್ಶೀವಾದ ಮಾಡುತ್ತಿದ್ದಾರೆ. ಛಾಯಾಗ್ರಹಣ ಮಹೇನ್ ಸಿಂಹ, ಸಂಗೀತ ಲೋಕನಾಥ್ ಹಾಗೂ ಯೋಗಾನಂದ್ ಅವರಿಂದ ಚಿತ್ರಕ್ಕೆ ಸಂಭಾಷಣೆ ಮೂಡಿ ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.




