Breaking NewsLatestರಾಜಕೀಯರಾಜ್ಯರಾಷ್ಟ್ರೀಯಸುದ್ದಿ

11 ಗಂಟೆವರೆಗೆ ಯುಪಿಯಲ್ಲಿ ಶೇ.21, ಪಂಜಾಬಿನಲ್ಲಿ ಶೇ.17.77 ಮತದಾನ

ನವದೆಹಲಿ: ಉತ್ತರ ಪ್ರದೇಶದದಲ್ಲಿ 3ನೇ ಹಂತದ ಮತ್ತು ಪಂಜಾಬಿನಲ್ಲಿ ಒಂದೇ ಹಂತದ ಮತದಾನ ಸುಗಮವಾಗಿ ಸಾಗುತ್ತಿದೆ. ಬೆಳಗ್ಗೆ 11 ಗಂಟೆವರೆಗೆ ಪಂಜಾಬ್ ನಲ್ಲಿ ಶೆ.17.77 ರಷ್ಟು, ಯುಪಿಯಲ್ಲಿ ಶೇ.21 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.  ಯುಪಿಯಲ್ಲಿ 6 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ 7 ಹಂತದ ಚುನಾವಣೆ ನಡೆಯುತ್ತಿದೆ.

ಪಂಜಾಬ್ ನಲ್ಲಿ 117 ಸ್ಥಾನಗಳಿಗೆ ಏಕ ಹಂತದಲ್ಲಿ ಮತದಾನ ಪ್ರಗತಿಯಲ್ಲಿದೆ.

ಪ್ರಧಾನಿ ಮನವಿ

ಇಂದು ನಡೆಯಲಿರುವ ಪಂಜಾಬ್ ಮತ್ತು ಉತ್ತರಪ್ರದೇಶದ 3 ನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಜನತೆ ವಿಶೇಷವಾಗಿ ಯುವಜನರು ಮತ್ತು ಮೊದಲ ಬಾರಿ ಓಟು ಹಾಕುತ್ತಿರುವ ಮತದಾರರು ತಮ್ಮ ಮತದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಲಾಯಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button