Latestಮೆಟ್ರೋರಾಜಕೀಯರಾಜ್ಯ

ರೌಡಿ ಕೊತ್ವಾಲ್ ಶಿಷ್ಯನ ದರ್ಪ ಅಮಾಯಕರ ಮೇಲೆ ಬೇಡ; ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಸರಣಿ ಟ್ವೀಟ್

ಬೆಂಗಳೂರು: ಪಕ್ಷದ ಕಾರ್ಯಕರ್ತನೊಬ್ಬನಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೊಡೆದರೆಂಬ ವಿಚಾರವನ್ನು ಎತ್ತಿಕೊಂಡಿರುವ ಬಿಜೆಪಿ, ನೀವು ರಾಜಕಾರಣಿಯೊ ರೌಡಿಯೋ ಎಂದು ಪ್ರಶ್ನಿಸಿದೆ.

ರೌಡಿಡಿಕೆಶಿ ಎಂಬ ಹ್ಯಾಷ್​ಟ್ಯಾಗ್​ನಲ್ಲಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಜಿ ಮಾದೇಗೌಡರ ಆರೋಗ್ಯ ವಿಚಾರಿಸಲು ಮಂಡ್ಯದ ಕೆಎಂ ದೊಡ್ಡಿಗೆ ಡಿಕೆ ಶಿವಕುಮಾರ್ ಹೋಗಿದ್ದ ವೇಳೆ ಹೋಮದೆ ಬರುತ್ತಿದ್ದ ಕಾರ್ಯಕರ್ತನೊಬ್ಬ ಫೋಟೋಗೆ ಪೋಸು ಕೊಡಲು ಅವರ ಹೆಗಲ ಮೇಲೆ ಕೈಹಾಕಿದನೆಂದು ಸಿಟ್ಟಾಗಿದ್ದಾರೆ. ಸಲಿಗೆ ಕೊಟ್ಟರೆ ಗೌರವ ಉಳಿಸಿಕೊಳ್ಳುವುದನ್ನು ಕಲಿಯಬೇಕೆಂದು ಹೇಳುತ್ತ ಕಾರ್ಯಕರ್ತನಿಗೆ ಡಿಕೆ ಶಿವಕುಮಾರ್ ಹೊಡೆದಿರುವುದು ಸುದ್ದಿಗೆ ಗ್ರಾಸವಾಗಿದೆ.

ಈ ವಿಚಾರವನ್ನೇ ಇದೀಗ ಬಿಜೆಪಿ, ಡಿಕೆ ಶಿವಕುಮಾರ್ ವಿರುದ್ಧ ಪ್ರಶ್ನಿಸಲು ಬಳಸಿಕೊಂಡಿದೆ. ಮಾಧ್ಯಮಗಳ ಎದುರೇ ವ್ಯಕ್ತಿಯೊಬ್ಬರ ಹಲ್ಎ ಮಾಡುವುದು ಅವರ ಕ್ರೂರ ಮನಃಸ್ಥಿತಿಯನ್ನು ಸೂಚಿಸುತ್ತದೆ ಎಂದು ಟ್ವೀಟ್​ನಲ್ಲಿ ಟೀಕಿಸಲಾಗಿದೆ. ಈ ಹಿಂದೆ ಸೆಲ್ಫೀ ತೆಗೆಯಲು ಬಂದಿದ್ದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದರು ಎಂದೂ ಬಿಜೆಪಿ ನೆನಪಿಸಿದೆ.

ಸರಣಿ ಟ್ವೀಟ್​ಗಳನ್ನು ಮಾಡಿರುವ ಬಿಜೆಪಿ, ನೀವೇನು ಹೊಡಿಬಡಿ ರಾಜಕಾರಣದ ಬ್ರ್ಯಾಂಡ್ ಅಂಬಾಸಿಡರ್ ಆಗಲು ಹೊರಟಿದ್ದೀರಾ ಎಂದು ಪ್ರಶ್ನಿಸಿದೆ. ನೀವು ರೌಡಿ ಕೊತ್ವಾಲನ ಶಿಷ್ಯನಾಗಿರಬಹುದು. ಆದರೆ ಆ ಗುಣವನ್ನು ಅಮಾಯಕರ ಮೇಲೆ ತೋರ್ಪಡಿಸಬೇಡಿ ಎಂದು ವ್ಯಂಗ್ಯ ಮಾಡಿದೆ.

ಈ ಹಿಂದೆ ವ್ಯಕ್ತಿಯೊಬ್ಬರು ಕರೆ ಮಾಡಿ ವಿದ್ಯುತ್ ಸಮಸ್ಯೆ ಹೇಳಿಕೊಂಡಿದ್ದಾಗ ಆತನನ್ನು ಬಂಧಿಸಲು ಮುಂದಾಗಿದ್ದ ಡಿಕೆ ಶಿವಕುಮಾರ್ ನಡೆಯನ್ನೂ ಬಿಜೆಪಿ ಟ್ವೀಟ್ ಒಂದರಲ್ಲಿ ಪ್ರಸ್ತಾಪಿಸಿದೆ.

Spread the love

Related Articles

Leave a Reply

Your email address will not be published. Required fields are marked *

Back to top button