Latestಮೆಟ್ರೋ

ಸಾವಿರಾರು ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ; ಮಾರಕಾಸ್ತ್ರ, ಮಾದಕದ್ರವ್ಯ ವಶ; ಪರಪ್ಪನ ಅಗ್ರಹಾರದಲ್ಲೂ ಗಾಂಜಾ ಪತ್ತೆ

ಬೆಂಗಳೂರು: ಬೆಂಗಳುರಿನಲ್ಲಿ ರೌಡಿಗಳ ವಿರುದ್ಧ ಪೊಲೀಸರು ಭಾರೀ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಬೆಳಗ್ಗೆಯೇ ಸಾವಿರಾರು ರೌಡಿಗಳ ಮನೆ ಮೇಲೆ ದಾಳಿ ನಡೆಸಿ, ನೂರಕ್ಕೂ ಹೆಚ್ಚು ರೌಡಿ ಶೀಟರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ 8 ವಲಯಗಳ ಪೊಲೀಸರಿಂದ ಏಕಕಾಲಕ್ಕೇ ದಾಳಿ ನಡೆದಿದೆ. ಬೆಂಗಳೂರು ಅನ್​ಲಾಕ್ ಆದ ಬಳಿಕ ಅಪರಾಧ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಈ ರೇಡ್ ನಡೆದಿದೆ.

ವಶಕ್ಕೆ ತೆಗೆದುಕೊಳ್ಳಲಾದ ರೌಡಿಗಳನ್ನು ವೈದ್ಯಕೀಯ ಪರಿಕ್ಷೆಗೆ ಒಳಪಡಿಸಲಾಗಿದೆ. ದಾಳಿ ವೇಳೆ ಕೆಲವೆಡೆ ಗಾಂಜಾ ಮತ್ತಿತರ ಮಾದಕ ವಸ್ತುಗಳು ಪತ್ತೆಯಾಗಿದ್ದರೆ, ಇನ್ನು ಕೆಲವೆಡೆ ಮಾರಕಾಸ್ತ್ರಗಳು ಪತ್ತೆಯಾಗಿವೆ.

ಪರಪ್ಪನ ಅಗ್ರಹಾರದ ಜೈಲಿನ ಮೇಲೂ ರೇಡ್

ಇನ್ನೊಂದೆಡೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಳಗ್ಗೆ 5 ಗಂಟೆಗೇ ಈ ದಾಳಿ ನಡೆದಿದೆ. ಜೈಲಿನಲ್ಲಿಯೂ ಗಾಂಜಾ, ಮೊಬೈಲ್ ಸಿಮ್, ಚಾಕು ಮೊದಲಾದ ಮಾರಕ ವಸ್ತುಗಳು ಸಿಕ್ಕಿವೆ.

ಜೈಲಿನಲ್ಲಿದ್ದುಕೊಂಡೇ ರೌಡಿಸಂ ಮತ್ತು ಅಪರಾಧ ಕೃತ್ಯ ನಡೆಸುವುದಕ್ಕೆ ಸ್ಕೆಚ್ ಹಾಕುತ್ತಿರುವುದರ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಈ ಎರಡು ದಾಳಿಗಳು ನಡೆದಿವೆ.

Spread the love

Related Articles

Leave a Reply

Your email address will not be published. Required fields are marked *

Back to top button