ಮನರಂಜನೆಸಿನಿಮಾಸೆಲೆಬ್ರಿಟಿ

ಹೊಸ ವರ್ಷದ ಬಳಿಕ ಶುರುವಾಯ್ತಾ ಸಮಂತಾ, ನಾಗಚೈತನ್ಯ ಮಧ್ಯೆ ಮನಸ್ತಾಪ

ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ದೂರವಾಗಿ 5 ತಿಂಗಳಾಗುತ್ತ ಬಂದಿದೆ. ಆದ್ರೆ ಈ ಇಬ್ಬರ ಡಿವೋರ್ಸ್ ಸುದ್ದಿ ಮಾತ್ರ ಇದುವರೆಗೂ ತಣ್ಣಗಾಗಿಲ್ಲ. ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಈ ಜೋಡಿಯ ಡಿವೋರ್ಸ್ ಸುದ್ದಿ ಹರಿದಾಡುತ್ತಲೇ ಇರುತ್ತೆ. ಇದೀಗ ನಟ ನಾಗಾರ್ಜನ್ ಮಗ, ಸೊಸೆ ದೂರವಾಗಿರೋ ಬಗ್ಗೆ ಮಾತನಾಡಿದ್ದಾರೆ.

ಸಮಂತಾ ಹಾಗೂ ನಾಗಚೈತನ್ಯ 7 ಅಕ್ಟೋಬರ್ 2017ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿಗಳು ನಾಲ್ಕೇ ನಾಲ್ಕು ವರ್ಷಕ್ಕೆ ದೂರ ದೂರವಾಗಿ ಬಿಟ್ಟರು. ಇದು ಅವರ ಅಭಿಮಾನಿಗಳನ್ನ ಕಂಗಾಲಾಗುವಂತೆ ಮಾಡಿದೆ. ಸಮಂತ ಹಾಗೂ ನಾಗಚೈತನ್ಯ ದೂರವಾದ ಬಳಿಕ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಜೋಡಿಗಳ ಡಿವೋರ್ಸ್​ಗೆ ಕಾರಣ ಹುಡುಕೋದು ಮಾತ್ರ ಇನ್ನೂ ನಿಂತಿಲ್ಲ.

ಸ್ಯಾಮ್, ಚೈ ದೂರವಾದ ಬಳಿಕ ಸಮಂತಾ ಅಭಿಮಾನಿಗಳು ನಾಗಚೈತನ್ಯ ಮೇಲೆ ಗರಂ ಆದರೆ ನಾಗಚೈತನ್ಯ ಅಭಿಮಾನಿಗಳು ಸಮಂತರ ಮೇಲೆ ಕೋಪಗೊಂಡಿದ್ದರು. ಅಲ್ಲದೆ ನಾಗಚೈತನ್ಯ ಕುಟುಂಬ ಸಮಂತರನ್ನ ಕಟ್ಟಿ ಹಾಕಲು ಯತ್ನಿಸಿತ್ತು. ಸಿನಿಮಾಗಳಲ್ಲಿ ನಟಿಸಲು ನಿರ್ಬಂಧ ಹೇರಿದ್ದರು. ಬೋಲ್ಡ್ ಸೀನ್​ಗಳಲ್ಲಿ ನಟಿಸಿದ್ದು ಇಷ್ಟವಾಗಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ನಟ ನಾಗಾರ್ಜುನ್ ಈ ಬಗ್ಗೆ ಮಾತನಾಡಿದ್ದು ಡಿವೋರ್ಸ್ ಬೇಕು ಎಂದಿದ್ದೇ ಸಮಂತ ಎಂದಿದ್ದಾರೆ.

ನಾಲ್ಕು ವರ್ಷ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು. ಇವರ ಸಂಸಾರ ಚೆನ್ನಾಗಿತ್ತು. ಬಿಡುವು ಸಿಕ್ಕಾಗೆಲ್ಲಾ ಇಬ್ಬರು ಔಟಿಂಗ್ ಹೋಗುತ್ತಿದ್ದರು. ಒಟ್ಟಿಗೆ ಜಿಮ್, ಪ್ರವಾಸ ಎಂದು ಎಂಜಾಯ್ ಮಾಡುತ್ತಿದ್ದರು. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಆದರೆ ದಿಢೀರನೇ ಈ ನಿರ್ಧಾರವನ್ನ ಯಾಕೆ ತೆಗೆದುಕೊಂಡರು ಎನ್ನುವುದು ನನಗೆ ಗೊತ್ತಿಲ್ಲ. 2021ರ ಹೊಸ ವರ್ಷವನ್ನು ಇಬ್ಬರೂ ಒಟ್ಟಿಗೆ ಸಂಭ್ರಮಿಸಿದ್ದರು. ಇದಾದ ಬಳಿಕ ಸಮಸ್ಯೆ ಎದುರಾಗಿರಬಹುದು ಎಂದು ನಾಗಾರ್ಜುನ್ ಹೇಳಿದ್ದಾರೆ.

ಸಮಂತಾ ತೆಗೆದುಕೊಂಡ ನಿರ್ಧಾರವನ್ನು ನಾಗಚೈತನ್ಯ ಒಪ್ಪಿಕೊಂಡ. ಆ ವೇಳೆ ನಾಗಚೈತನ್ಯ ನನ್ನ ಬಗ್ಗೆ ಅತಂಕಕ್ಕೆ ಒಳಗಾಗಿದ್ದ. ಕುಟುಂಬದ ಮರ್ಯಾದೆ ಏನಾಗುತ್ತೋ ಎನ್ನುವ ಬಗ್ಗೆ ಮಗನಿಗೆ ಚಿಂತೆಯಿತ್ತು ಎಂದಿದ್ದಾರೆ ನಟ ನಾಗಾರ್ಜುನ್. ಆ ಮೂಲಕ ನಟಿ ಸಮಂತಾನೆ ಮಗನಿಂದ ಡಿವೋರ್ಸ್ ಬಯಸಿದ್ದಾಗಿ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button