ಆರೋಗ್ಯಮನರಂಜನೆಲೈಫ್ ಸ್ಟೈಲ್ಸಿನಿಮಾಸೆಲೆಬ್ರಿಟಿಸೌಂದರ್ಯ

ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗಾಗಿ ನಟಿ ಆಲಿಯಾ ಭಟ್ ಈ ಯೋಗ ಮಾಡುತ್ತಾರಂತೆ

ನಟಿ ಆಲಿಯಾ ಭಟ್ ಬಾಲಿವುಡ್ ನ ಖ್ಯಾತ ನಟಿಯರಲ್ಲಿ ಒಬ್ಬರು. ಇವರು ತಮ್ಮ ನಟನೆಯ ಮೂಲಕ ಮಾತ್ರವಲ್ಲ ತಮ್ಮ ಸೌಂದರ್ಯದ ಮೂಲಕವೂ ಅನೇಕ ಜನರ ಮನಸೆಳೆದಿದ್ದಾರೆ. ಇದೀಗ ನಟಿ ಆಲಿಯಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನು ಹಂಚಿಕೊಂಡಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಗಾಗಿ ಪ್ರತಿದಿನ ಯಾವೆಲ್ಲಾ ಯೋಗಾಸನ ಮಾಡುತ್ತಾರೆ ಮತ್ತು ಅದರ ಪ್ರಯೋಜನ ಏನೆಂಬುದನ್ನು ತಿಳಿಸಿದ್ದಾರೆ.

ನಟಿ ಆಲಿಯಾ ಭಟ್ ಮುಖದ ಹೊಳಪನ್ನು ಹೆಚ್ಚಿಸಲು ಪ್ರತಿದಿನ ಅರ್ಧ ಮತ್ಸ್ಯೇಂದ್ರಸನ ಮಾಡುತ್ತಾರಂತೆ. ಇದು ಕಿಬ್ಬೊಟ್ಟೆಯ ಪ್ರದೇಶದ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಆಂತರಿಕ ಅಂಗಗಳನ್ನು ಮಸಾಜ್ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಮುಖದ ಹೊಳಪನ್ನು ಹೆಚ್ಚಿಸುತ್ತದೆ.

ಉತ್ಥಿತ ವಸಿಷ್ಠಾಸನ ಕೈಗಳು, ಹೊಟ್ಟೆ ಮತ್ತು ಕಾಲುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಮಣಿಕಟ್ಟುಗಳು, ಪಾದಗಳ ಹಿಂಭಾಗವನ್ನು ವಿಸ್ತರಿಸುತ್ತದೆ ಮತ್ತು ಬಲಪಡಿಸುತ್ತದೆ. ಇದು ದೇಹದ ಸಮತೋಲನವನ್ನು ಸುಧಾರಿಸುತ್ತದೆ.

ನೌಕಾಸನ ತೋಳು, ಹೊಟ್ಟೆ, ತೊಡೆ ಮತ್ತು ಭುಜದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಲಿವರ್, ಮೇದೋಜ್ಜೀರಕ ಗ್ರಂಥಿ ಮತ್ತು ಕಿಡ್ನಿ ಆರೋಗ್ಯವನ್ನು ಸುಧಾರಿಸುತ್ತದೆ.

ಧನುರಾಸನ ನಮ್ಮ ಕೈಕಾಲುಗಳು, ಸೊಂಟ, ಹೊಟ್ಟೆ, ಎದೆ ಮತ್ತು ಗಂಟಲಿನ ಸ್ನಾಯುಗಳನ್ನು ಹಿಗ್ಗಿಸುತ್ತದೆ. ಇದು ಮನೆ ಕೆಲಸ ಮಾಡುವ ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ.
ವೃಕ್ಷಾಸನ ಕಾಲುಗಳನ್ನು ಬಲಪಡಿಸುತ್ತದೆ ಮತ್ತು ಏಕಾಗ್ರತೆಯನ್ನು ಸುಧಾರಿಸುತ್ತದೆ.

ಉತ್ತನಾಸನ ಮೆದುಳನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ನಿವಾರಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದಾಗಿ ನಟಿ ಆಲಿಯಾ ಭಟ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button