ಮಂಡ್ಯ
ಆಲೆಮನೆಗೆ ಭೇಟಿ ನೀಡಿ ಬೆಲ್ಲದ ರುಚಿ ಸವಿದ ಶೋಭಾ ಕರಂದ್ಲಾಜೆ

ಮಂಡ್ಯ: ಅಲೆಮನೆಗಳಿಗೆ ಭೇಟಿ ನೀಡಿದ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮಂಡ್ಯ ಬೆಲ್ಲವನ್ನು ಸವಿದಿದ್ದಾರೆ.
ಮಂಡ್ಯ ಪ್ರವಾಸದಲ್ಲಿರುವ ಸಚಿವೆ ಶೋಭಾ ಕರಂದ್ಲಾಜೆ, ಮಂಡ್ಯ ತಾಲೂಕಿನ ಸಾತನೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಗ್ರಾಮದ ವೆಂಕಟೇಶ್ವರ ಆಲೆಮನೆಗೆ ಭೇಟಿ ನೀಡಿ ಆಲೆಮನೆಯ ಗಾಣಕ್ಕೆ ಕಬ್ಬನ್ನು ಹಾಕಿ ಕಬ್ಬು ನುರಿಯುವ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಬಳಿಕ ಸಾವಯವ ಬೆಲ್ಲದ ತಯಾರಿ ಜಾಗಕ್ಕೆ ತೆರಳಿ ಬೆಲ್ಲ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಇದಾದ ಬಳಿಕ ಸಿದ್ದವಾಗ್ತಿದ್ದ ಬೆಲ್ಲದ ರುಚಿಯನ್ನ ಕೂಡ ಸವಿದರು.
ಸಚಿವೆ ಶೋಭಾ ಕರಂದ್ಲಾಜೆ ಜೊತೆಗೆ ಸಚಿವ ನಾರಾಯಣಗೌಡ ಕೂಡ ಇದ್ದರು.




