ಮನರಂಜನೆರಾಷ್ಟ್ರೀಯಸಿನಿಮಾಸುದ್ದಿಸೆಲೆಬ್ರಿಟಿ
ಮೆಗಾ ಸ್ಟಾರ್ ಚಿರಂಜೀವಿಯನ್ನು ಆಹ್ವಾನಿಸಿದ ಸಿಎಂ ಜಗನ್ ಮೋಹನ್ ರೆಡ್ಡಿ

ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಭೇಟಿ ಮಾಡಲು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದು, ಹಾಗಾಗಿ ನಟನಿಗೆ ಆಹ್ವಾನ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಜಗನ್ ಮೋಹನ್ ಪರವಾಗಿ ರಾಜ್ಯ ಸಚಿವ ಪೆರ್ನಿ ನಾನಿ ಚಿರಂಜೀವಿ ಅವರಿಗೆ ಕರೆ ಮಾಡಿ ಆಗಸ್ಟ್ ಕೊನೆಯ ವಾರ ಸಭೆ ನಡೆಯಲಿದೆ. ಹಾಗಾಗಿ ಸಿಎಂ ಅನ್ನು ಭೇಟಿ ಮಾಡಿ ತೆಲುಗು ಚಿತ್ರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ನಾಗಾರ್ಜುನ, ರಾಜಮೌಳಿ, ಚಿರಂಜೀವಿ, ಸುರೇಶ್ ಬಾಬು ಮತ್ತು ಇತರರನ್ನು ಸಿಎಂಯನ್ನು ಭೇಟಿ ಮಾಡಿ ಕೊರೊನಾವೈರಸ್ ನಿಂದಾಗಿ ಟಾಲಿವುಡ್ ನಲ್ಲಿ ಕಾಡುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಹಾಗಾಗಿ ಇದೀಗ ಸಿಎಂ ಟಾಲಿವುಡ್ ನ ಹಿರಿಯ ನಟನ ಮೂಲಕ ತೆಲುಗು ಚಿತ್ರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.




