ಉತ್ತರ ಕನ್ನಡ

ಕಾರವಾರ: ಕಾಳಿ ನದಿ ದಡದಲ್ಲಿನ 45 ಟನ್ ಅಕ್ರಮ ಮರಳು ವಶ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ ನದಿ ತೀರ ಪ್ರದೇಶದ ಸುಂಕೇರಿ,ನಂದನಗದ್ದಾ,ಗಾಬಿತವಾಡ,ನದಿವಾಡ ಪ್ರದೇಶಗಳಲ್ಲಿ ಅನಧಿಕೃತವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಅಡ್ಡೆ ಮೇಲೆ ಉಪವಿಭಾಗಾಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಸುಮಾರು 45 ಟನ್ ಗಳಷ್ಟು ಮರಳನ್ನು ವಶಕ್ಕೆ ಪಡೆಯಲಾಯಿತು.

ವಶಕ್ಕೆ ಪಡೆದ ಮರಳನ್ನು ಸರ್ಕಾರದ ವಿವಿಧ ಕಾಮಗಾರಿಗಳಿಗೆ ಬಳಸಿಕೊಳ್ಳಲು ಜಿಲ್ಲಾ ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು ಎಂದು ಕಾರವಾರ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಅವರು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ಕೊಟ್ಟ ಉಪವಿಭಾಗಾಧಿಕಾರಿಗಳು ಕಾಳಿ ನದಿ ಪಾತ್ರದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೋಟ್ ಮೂಲಕ ತೆರಳಿ ಅಕ್ರಮವಾಗಿ ಮರಳು ತೆಗೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.ಈ ಕಾರ್ಯಾಚರಣೆಯಲ್ಲಿ ಕಾರವಾರ ತಹಶೀಲ್ದಾರ,ಪೊಲೀಸ್ ವೃತ್ತ ನಿರೀಕ್ಷಕರು,ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಕಂದಾಯ ಮತ್ತು ಪೋಲೀಸ್ ಇಲಾಖೆಗಳ ಸಿಬ್ಬಂದಿ ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button