ಉತ್ತರ ಕನ್ನಡ

ಕುಮಟಾ: ಧರೆಗುರುಳಿದ 250 ವರ್ಷಕ್ಕೂ ಹಳೆಯ ಅರಳಿಮರ

ಕಾರವಾರ : ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಕುಮಟಾ ತಾಲೂಕು ಹಲವು ವಿಶೇಷತೆಗಳ ಆಗರ.ಆಧುನೀಕತೆಯ ಭರಾಟೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿರುವ ಕುಮಟಾ ಪಟ್ಟಣ ವೈವಿದ್ಯಮಯ ತಾಣಗಳಲ್ಲಿ ಒಂದು.

ಪಟ್ಟಣದ ಐಸಿಐಸಿಐ ಬ್ಯಾಂಕ್ ಪಕ್ಕದಲ್ಲಿದ್ದ ಸುಮಾರು ಎರಡೂವರೆ ಶತಮಾನ ಬಾಳಿ ಬದುಕಿದ್ದ ಬೃಹತ್ ಅರಳಿಮರ (ಅಶ್ವತ್ಥವೃಕ್ಷ ) ಪರಂಪರೆ ಹಾಗೂ ಜನ ಜೀವನದ ಕೊಂಡಿಗೆ ಸಾಕ್ಷಿ ಎಂಬಂತಿತ್ತು.

ಸೋಮವಾರ ರಾತ್ರಿ ಸುರಿದ ಬಾರೀ ಮಳೆಗೆ ಎರಡೂವರೆ ಶತಮಾನ ಬಾಳಿ ಬದುಕಿದ್ದ ಬೃಹತ್ ಅರಳಿಮರ (ಅಶ್ವಥ್ ವೃಕ್ಷ ) ಬೇರು ಸಮೇತ ಕಿತ್ತು ಧರೆಗುರುಳಿದೆ.

1775 ರಲ್ಲಿ ಗೋವಿಂದ ಕಾಮತ್ ಎನ್ನುವವರು ಈ ಮರಕ್ಕೆ ಧಾರ್ಮಿಕ ವಿಧಿ ವಿಧಾನದಂತೆ ಉಪನಯನ ಮಾಡಿದ್ದರೆಂಬ ಐತಿಹ್ಯವಿದೆ.ಈ ಮರ ಅಲ್ಲಿಂದ ಇಲ್ಲಿಯವರೆಗೂ ಕುಮಟಾ ಪಟ್ಟಣದ ಪ್ರತಿಯೊಂದು ಬೆಳವಣಿಗೆಗೆ ಮೂಕಸಾಕ್ಷಿಯಾಗಿ ನಿಂತಿತ್ತು.

ಹಲವು ತಲೆಮಾರುಗಳು ಭಕ್ತಿಯಿಂದ ಆರಾಧಿಸಿದ್ದ ಮರ ಬುಡ ಸಮೇತ ಕಿತ್ತು ಬಿದ್ದು ಇನ್ನಿಲ್ಲವಾಗಿದೆ.ಕೆಲಕಾಲ ಸ್ಥಳದಲ್ಲಿ ಓಡಾಟ ಕಷ್ಟವಾಗಿತ್ತೆನ್ನುವುದು ಬಿಟ್ಟರೆ ಪ್ರಾಣ ಹಾನಿ ಏನು ಸಂಭವಿಸಿಲ್ಲ.ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button