ಉತ್ತರ ಕನ್ನಡ

ಯಲ್ಲಾಪುರದಲ್ಲಿ ಅರಬೈಲ್ ಘಟ್ಟ ಕುಸಿತ; ವಾಹನ ಸಂಚಾರಕ್ಕೆ ಅಡ್ಡಿ

ಕಾರವಾರ : ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿದು ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಅಂಕೋಲಾದಿಂದ ಯಲ್ಲಾಪುರ ಮತ್ತು ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು,ಅರಬೈಲ್ ಘಟ್ಟದಲ್ಲಿ ನೂರಾರು ಅಡಿಗಳಷ್ಟು ಮಣ್ಣು ಕುಸಿದು ಹೋಗಿದ್ದು,ಹೆದ್ದಾರಿಯ ಒಂದು ಭಾಗ ಸಂಪೂರ್ಣ ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ರಸ್ತೆಯ ಎರಡೂ ಕಡೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು,ಪರಿಸ್ಥಿತಿ ಅಯೋಮಯವಾಗಿದೆ.ಸ್ಥಳದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಬೀಡು ಬಿಟ್ಟಿದ್ದು,ವಾಹನಗಳ ಸಂಚಾರಕ್ಕೆ ಪರ್ಯಾಯ ರಸ್ತೆ ಕಲ್ಪಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸುಂಕಸಾಳ ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯೂ ಕೂಡ ಗಂಗಾವಳಿ ನದಿ ನೀರು ಹರಿದು ಭಾಗಶಃ ಜಲಾವೃತವಾಗಿದೆ.ಪುಷ್ಯ ಮಳೆ ಹೀಗೆ ಮುಂದುವರಿದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು 15 ದಿನಗಳೇ ಬೇಕಾಗಬಹುದೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button