ಉತ್ತರ ಕನ್ನಡ
ಅರಬೈಲ್ ಘಟ್ಟದಲ್ಲಿ ಚಲಿಸುತ್ತಿದ್ದ ಟ್ಯಾಂಕರ್ನಿಂದ ಕಳಚಿದ ಗ್ಯಾಸ್ ಟ್ಯಾಂಕ್; ತಪ್ಪಿದ ಭಾರೀ ದುರಂತ

ಕಾರವಾರ : ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನ ಟ್ಯಾಂಕ್ ಕಳಚಿ ಹೆದ್ದಾರಿಗೆ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟದಲ್ಲಿ ಶನಿವಾರ ನಡೆದಿದೆ.
ಮಹಾರಾಷ್ಟ್ರ ಮೂಲದ ಮಂಗಳೂರಿನಿಂದ ಹುಬ್ಬಳ್ಳಿ ಕಡೆ ಭಾರತ್ ಗ್ಯಾಸ್ ಕಂಪನಿಯ ಗ್ಯಾಸ್ ತುಂಬಿದ ಟ್ಯಾಂಕ್ ಹೊತ್ತೊಯ್ಯುತ್ತಿದ್ದ ಟ್ಯಾಂಕರ್ ಚಲಿಸುತ್ತಿದ್ದಾಗ ಟ್ಯಾಂಕರ್ ನ ಕೊಂಡಿ ಕಳಚಿದ್ದರಿಂದ ಚಲಿಸುತ್ತಿರುವಾಗಲೇ ಹೆದ್ದಾರಿಗೆ ಬಿದ್ದಿದೆ.
ತಕ್ಷಣದಲ್ಲಿ ಹೆದ್ದಾರಿ ನಿರ್ವಹಣೆ ಅಧಿಕಾರಿ ಮುರುಗೇಶ್ ರವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರಿಂದ ತಕ್ಷಣದಲ್ಲಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹಾಜರಾಗಿ ಯಾವುದೇ ದುರಂತವಾಗದಂತೆ ತಡೆದಿದ್ದಾರೆ.ಈ ಸಂದರ್ಭದಲ್ಲಿ ಕೆಲ ಸಮಯ ಹುಬ್ಬಳ್ಳಿ – ಅಂಕೋಲಾ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು.ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




