ಉತ್ತರ ಕನ್ನಡ
ಕಾರವಾರ ನೌಕಾನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ

ಕಾರವಾರ : ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆಯಾಗಿರುವ ಐಎನ್ಎಸ್ ಕದಂಬಕ್ಕೆ ಗುರುವಾರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದರು.
ಮಧ್ಯಾಹ್ನ ಗೋವಾದಿಂದ ಹೆಲಿಕಾಪ್ಟರ್ ಮೂಲಕ ನೌಕಾನೆಲೆಗೆ ಬಂದಿಳಿದ ರಾಜನಾಥ ಸಿಂಗ್, ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ಕಾಮಗಾರಿಯನ್ನು ವೀಕ್ಷಿಸಿದರು.ಇದೇ ವೇಳೆ ನೌಕಾನೆಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಟ್ಟಿಯೊಂದನ್ನು ಉದ್ಘಾಟಿಸಿದರು.
ಐಎನ್ಎಸ್ ಕದಂಬ ಹೆಲಿಪ್ಯಾಡ್ಗೆ ಬರುವ ಮೊದಲು ಯೋಜನಾ ಪ್ರದೇಶ ಮತ್ತು ನಿವೇಶನಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡರು. ಭೇಟಿ ನೀಡಿದ ಗಣ್ಯರನ್ನು ಪಶ್ಚಿಮ ನೌಕಾಪಡೆಯ ಕಮಾಂಡ್ ಫ್ಲಾಗ್ ಆಫೀಸರ್ ಅಡ್ಮಿರಲ್ ಮಹೇಶ್ ಸಿಂಗ್, ಕಮಾಂಡಿಂಗ್ ವೈಸ್ ಅಡ್ಮಿರಲ್ ಆರ್.ಹರಿಕುಮಾರ್ ಸ್ವಾಗತಿಸಿದರು.ಗಳು,ಅಧಿಕಾರಿಗಳು,ನಾವಿಕರು ಮತ್ತು ಕಾರವಾರ ನೌಕಾನೆಲೆಯ ನಾಗರಿಕರೊಂದಿಗೆ ಸಂವಹನ ನಡೆಸಿದರು.




