ಕಲಬುರ್ಗಿ

ಬೈಕ್-ಟೆಂಪೋ-ಕಾರ್ ಸರಣಿ ಅಪಘಾತ; ಅಣ್ಣ ತಂಗಿ ಸ್ಥಳದಲ್ಲೇ ದುರ್ಮರಣ

ಕಲಬುರಗಿ: ಬೈಕ್, ಟೆಂಪೋ ಮತ್ತು ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಅಣ್ಣ ತಂಗಿ ಸಾವನ್ನಪ್ಪಿದ ಘಟನೆ ಕಲಬುರಗಿ ಹೊರವಲಯದ ಶರಣಸಿರಸಗಿ ಗ್ರಾಮದ ಬಳಿ ನಡೆದಿದೆ‌.

ಅಫಜಲಪುರ ತಾಲೂಕಿನ ಶಿವೂರು ಗ್ರಾಮದ ನಿವಾಸಿಗಳಾದ ಅಜಯ್ ರೋಡಗಿ 29 ಹಾಗೂ ಪ್ರೇಮಾ ಪ್ರವೀಣ 27 ಮೃತರು ಎಂದು ಗುರುತಿಸಲಾಗಿದೆ. ಇಬ್ಬರು ಮೃತರ ಬೈಕ್ ಮೇಲೆ ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟ್ಟಿದ್ದರು.ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.

ಇನ್ನೂ ಐವರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button