ಕಲಬುರ್ಗಿಬೆಂಗಳೂರು

ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ, ಡಾ.ಶಿವರಾಜ್ ವಿ.ಪಾಟೀಲ್ ಕುರಿತ “ಸುಪ್ರೀಂ ಸೋಲ್” ಪುಸ್ತಕ ಲೋಕಾರ್ಪಣೆ

ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಹಾಗೂ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ, ಡಾ.ಶಿವರಾಜ್ ವಿ.ಪಾಟೀಲ್ ಅವರ ಜತೆಗಿನ ಸಂದರ್ಶನಗಳನ್ನಾಧರಿಸಿದ ಸುಪ್ರೀಂ ಸೋಲ್ ಪುಸ್ತಕದ ಲೋಕಾರ್ಪಣೆ ಸಮಾರಂಭ ಬೆಂಗಳೂರಿನಲ್ಲಿ ಶನಿವಾರ ನಡೆಯಿತು.

ಪುಸ್ತಕವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು, ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರು ಒಬ್ಬ ಶ್ರೇಷ್ಠ ವ್ಯಕ್ತಿ. ಅವರ ಇಡೀ ಜೀವನಯಾನ ಇತರರಿಗೆ ಮಾದರಿ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ನ್ಯಾಯಮೂರ್ತಿ ಡಾ.ಶಿವರಾಜ್ ಪಾಟೀಲ್ ಅವರು, ಸಾಹಿತ್ಯ ಸೃಷ್ಟಿ ಮತ್ತು ಪುಸ್ತಕ ಪ್ರಕಾಶನಕ್ಕೆ ಆಸ್ತಿ, ಅಂತಸ್ತು ಅಡ್ಡಿ ಬರುವುದಿಲ್ಲ. ಅನೇಕ ದಾರ್ಶನಿಕರು ಅತಿ ಬಡತನದಲ್ಲೇ ಶ್ರೇಷ್ಠ ಕೃತಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ, ಪ್ರಕಾಶಕ ಡಾ.ಶಿವಾನಂದ ಬೇಕಲ್ ಅವರು, ಸವಿನಯ, ಸದಾಚಾರ,ಸಮತೋಲಿತ, ಸಮಂಜಸ ಮತ್ತು ಗಹನ, ಮೃದು ಹಾಗೂ ಸದ್ಗುಣ್ಣ ಸಂಪನ್ನ. ಆದರ್ಶ ವ್ಯಕ್ತಿ ಎಂದರು.

ಸುಪ್ರೀಂಕೋರ್ಟ್ನಲ್ಲಿ ನ್ಯಾಯಾಧೀಶರಾಗದೇ ಇರುತ್ತಿದ್ದರೆ ನಿವೇನಾಗಿರುತ್ತಿದ್ದೀರಿ ಎಂಬ ಪ್ರಶ್ನೆಗೆ ರಾಜಕಾರಣಿ ಎಂದು ಉತ್ತರಿಸಿದ್ದಾರೆ. ನನ್ನ ಪ್ರಕಾರ ಅವರು ಸಾಹಿತಿಯಾಗಿರುತ್ತಿದ್ದರು. ಜಸ್ಟೀಸ್ ಪಾಟೀಲ್ ಅವರ ಅನೇಕ ಸಾಹಿತ್ಯ ಕೃತಿಗಳು ಜನಜನಿತವಾಗಿವೆ ಎಂದೂ ಅವರು ಹೇಳಿದರು.

ಶಿವಾನಂದ ಬೇಕಲ್ ಅವರ ಪುತ್ರಿ ಚೈತ್ರಾ ಬೇಕಲ್ ಈ ವೇಳೆ ಮಾತನಾಡಿದರು.

ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಎಸ್.ಆರ್.ಬನ್ನೂರ್ ಮಠ್ ಅವರು, ಪ್ರಕಾಶನದ ಲಾಂಛನವನ್ನು ಬಿಡುಗಡೆ ಮಾಡಿದರು.

ಸ್ಪರ್ಶ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಶರಣ್ ಎಸ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಾಂತ್ ಪಾಂಡುರಂಗ ಅವರು ಕಾರ್ಯಕ್ರಮ ನಿರತವಹಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button