ಸಿನಿಮಾಸೆಲೆಬ್ರಿಟಿ

ದರ್ಶನ್ ಆಸ್ತಿ ದೋಖಾ ಹಿಂದೆ ‘ರಾಬರ್ಟ್’ ಉಮಾಪತಿ?

ಹೀಗೊಂದು ಅನುಮಾನದ ಹುತ್ತ ಇದೀಗ ನಟ ದರ್ಶನ್ ಆಪ್ತವಲಯದ ಸುತ್ತ ಎದ್ದು ನಿಂತಿದೆ.
ಡುಪ್ಲಿಕೇಟ್ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿಕೊಂಡು ಅರುಣಾಕುಮಾರಿ ಎಂಬಾಕೆ ನಟ ದರ್ಶನ್ ಅವರಿಂದ ಇಪತ್ತೈದು ಕೋಟಿ ಶ್ಯೂರಿಟಿ ಕೇಳಿದ್ದರು. ಖುದ್ದು ಅವರನ್ನೇ ಭೇಟಿಯಾಗಿ ಸ್ನೇಹಿತರಿಗೆ ಸಾಲ ಕೊಡಿಸುವ ನಾಟಕ ಆಡಿದ್ದರು. ಇದೀಗ ಅದೇ ವಿಷಯದಲ್ಲಿ ಅರುಣಾ ಕುಮಾರಿ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ಹಂತದಲ್ಲಿ ಅರುಣಾ ಅವರು ನಿರ್ಮಾಪಕ ಉಮಾಪತಿ ಅವರೇ ತನ್ನನ್ನು ದರ್ಶನ್ ಬಳಿ ಕಳಿಸಿದ್ದು ಎಂದಿದ್ದಾರೆ ಎನ್ನಲಾಗುತ್ತಿದೆ!

ದರ್ಶನ್ ಆಪ್ತರಿಗೆ ಉಮಾ ಮೇಲೆ ಅನುಮಾನ!

ಇವತ್ತಿನ ಬೆಳವಣಿಗೆ ಪ್ರಕಾರ ಖುದ್ದು ದರ್ಶನ್ ಆಪ್ತರೇ ಉಮಾಪತಿ ಮೇಲೆ ಅನುಮಾನ ಪಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎನ್ನುತ್ತಿದ್ದಾರೆ. ದರ್ಶನ್ ಅವರೇ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದ್ದು, ಈ ಎಲ್ಲಾ ಅನುಮಾನಗಳಿಗೆ ಅವರೇ ಉತ್ತರ ಕೊಡುತ್ತಾರಾ? ಅವರ ಆಸ್ತಿಪತ್ರಗಳನ್ನೂ ನಕಲು ಮಾಡಲಾಗಿದೆ ಎನ್ನಲಾದ ವಿಷಯಕ್ಕೂ ಕ್ಲಾರಿಟಿ ಕೊಡುತ್ತಾರಾ ಕಾದು ನೋಡಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button