ರಮೇಶ್ ಜಾರಕಿಹೊಳಿ ರಾಜೀನಾಮೆ ಮುಗಿದ ಅಧ್ಯಾಯ: ಡಿಸಿಎಂ ಅಶ್ವತ್ಥನಾರಾಯಣ

ಧಾರವಾ : ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕುರಿತಂತೆ ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಹೇಳಿದ್ದಾರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲಾ ಎಂದಿದ್ದಾರೆ, ಹಾಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಡಿಸಿಎಂ ಡಾ ಸಿಎನ್ ಅಶ್ವತ್ಥನಾರಾಯಣ ಹೇಳಿದರು.
ಈ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯಕ್ಕೆ ಸಂಚಿವ ಸಂಪುಡ ವಿಸ್ತರಣೆ ಇಲ್ಲಾ, ಇನ್ನೂ ರಮೇಶ ಜಾರಕಿಹೊಳಿಯವರು ರಾಜೀನಾಮೆ ಮುಗಿದ ಅಧ್ಯಾಯ ಎಂದು ಹೇಳಿರುವುದು ತುಂಬಾ ಖುಷಿಯಾದ ವಿಚಾರವಾಗಿದೆ, ರಮೇಶ ಅವರು ಸಮಾಧಾನ ಆಗಿರುವುದು ಒಳ್ಳೆಯ ಬೆಳವಣಿಯಾಗಿದೆ, ಅಲ್ಲದೆ ಪಕ್ಷದಲ್ಲಿ ನಡೆಯುವ ಎಲ್ಲ ಬೆಳವಣಿಗೆ ಕುರಿತು ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ, ಸಧ್ಯಕ್ಕೆ ನಮ್ಮ ಮುಂದೆ ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ಹರುಸಬೇಕಾಗಿದೆ ಎಂದು ಹೇಳಿದರು.
ಸುಮಲತಾ ಅಂಬರೀಶ್ v/s ಹೆಚ್ ಡಿಕೆ ಟಾಕ್ ವಾರ್
ಈಗಾಗಲೇ ಇಬ್ಬರು ನಾಯಕರು ಟಾಕ್ ವಾರ್ ಕುರಿತು ಶಾಂತಿ ಮಾಡಿಕೊಂಡು, ಪರಸ್ಪರ ಮಾತನಾಡುವುದಿಲ್ಲ ಎಂದು ಹೇಳಿಕೊಂಡು ನಿಲ್ಲಿಸುವು ಮುನ್ಸೂಚನೆ ನೀಡಿದ್ದಾರೆ, ಹಾಗಾಗಿ ಈ ವಿಚಾರದಲ್ಲಿ ಮಾತನಾಡುವು ಅಪ್ರಸ್ತುತವಾಗಿದೆ ಎಂದು ತಿಳಿಸಿದರು.
