Breaking NewsLatestರಾಜಕೀಯರಾಷ್ಟ್ರೀಯ

ರಜನೀ ರಾಜಕೀಯ ಇಲ್ಲ; ಪಕ್ಷ ಬರಖಾಸ್ತುಗೊಳಿಸಿದ ಸೂಪರ್ ಸ್ಟಾರ್

ಚೆನ್ನೈ: ರಾಜಕಾರಣಕ್ಕೆ ಬರುವ ಮಾತೇ ಇಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

ರಜನಿ ಮಕ್ಕಳ್ ಮಂದ್ರಂ ಪಕ್ಷವನ್ನು ವಿಸರ್ಜಿಸುವುದರೊಂದಿಗೆ ರಾಜಕಾರಣಕ್ಕೆ ಬರುವ ವಿಚಾರ ಮುಗಿದ ಅಧ್ಯಾಯವಾಗಿದೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ಸದಸ್ಯರೊಡನೆ ಅದರ ವಿಫಲತೆ ಕುರಿತಂತೆ ನಡೆಸಿದ ಸಭೆ ಬೆನ್ನಲ್ಲೇ ರಜನೀಕಾಂತ್ ಈ ಸ್ಪಷ್ಟನೆ ನೀಡಿದ್ದಾರೆ. ಪಕ್ಷವನ್ನು ವಿಸರ್ಜಿಸಿ, ಅದನ್ನು ರಜನೀಕಾಂತ್ ಅಭಿಮಾನಿ ಬಳಗದ ಕಲ್ಯಾಣ ವೇದಿಕೆಯಾಗಿ ಮಾರ್ಪಡಿಸಲಾಗಿದೆ.

ಇದರೊಂದಿಗೆ, ಅನಾರೋಗ್ಯದ ಕಾರಣದಿಮದ ಈಗಾಗಲೇ ರಾಜಕೀಯದಿಂದ ದೂರ ಇರುವುದಾಗಿ ನಿರ್ಧರಿಸಿದ್ದ ರಜನೀಕಾಂತ್ ತಮ್ಮ ನಿಲುವಿನ ವಿಚಾರವಾಗಿ ಇನ್ನಷ್ಟು ದೃಢತೆ ವ್ಯಕ್ತಪಡಿಸಿದಂತಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button