ಕಥೆ

ಗೆಲುವಿನ ದಾರಿ

ರಂಗಪ್ಪ ಎಂಬ ರೈತ ತನ್ನ ಮಗ ಶಂಕರನನ್ನು ಶಾಲೆಗೆ ಕಳುಹಿಸಿ ವಿದ್ಯಾಭ್ಯಾಸ ಕೊಡಿಸಿ ವಿದ್ಯಾವಂತನಾಗಿ ಮಾಡಬೇಕು ಎಂದು ಕನಸು ಕಂಡಿದ್ದ. ಅದರಂತೆ ಶಾಲೆಗೆ ಬೇಕಾದ ಬ್ಯಾಗು, ಪುಸ್ತಕಗಳನ್ನೆಲ್ಲಾ ಖರೀದಿಸಿ ಮೊದಲ ದಿನ ರಂಗಪ್ಪನೇ ತನ್ನ ಮಗನ್ನು ಶಾಲೆಗೆ ಹೋಗಿ ಬಿಟ್ಟು ಬಂದ. ಶಾಲೆಯಲ್ಲಿ ಹೊಸ ಗೆಳೆಯರು, ಅವರ ಕೀಟಲೆಯ ಬೈಗುಳ, ಹೊಡೆದಾಟ ಮೇಲಾಗಿ ಶಿಕ್ಷಕರೆಂಬ ಭಯದಿಂದಲೇ ಶಂಕರಪ್ಪ ತತ್ತರಿಸಿದ. ಅಂದು ಹೇಗೋ ಶಾಲೆಯಲ್ಲಿದ್ದು ಬಂದು ತನ್ನ ತಂದೆಯ ಹತ್ತಿರ ಅಪಯ್ಯ ನಾನು ನಾಳೆಯಿಂದ ಶಾಲೆಗೆ ಹೋಗುವುದಿಲ್ಲ.

ಅಲ್ಲಿ ಗೆಳೆಯರು ಹೊಡೆಯುತ್ತಾರೆ, ಬೈಯುತ್ತಾರೆ ಎಂದು ಹೇಳಿದ.ಆಗ ರಂಗಪ್ಪನು ಮಗನಿಗೆ ಹೊಸದಾಗಿ ಶಾಲೆಗೆ ಹೋಗಿದ್ದೀಯ ಅಲ್ವ ಸ್ವಲ್ಪ ದಿನ ಮಗಾ ಏನೂ ಆಗುವುದಿಲ್ಲ, ಮುಂದೆ ಅವರೆ ನಿನಗೆ ಮಿತ್ರರಾಗುತ್ತಾರೆ. ನೀನು ಧೈರ್ಯದಿಂದ ಇರು ಎಂದು ಹೇಳುತ್ತಾನೆ. ಆದರೆ ಶಂಕರನು ಕೇಳಲಿಲ್ಲ. ಮರುದಿನ ಮಗನಿಗೆ ಊಟದ ಚೀಲ ಮತ್ತು ಪಾರ್ಟಿ ಚೀಲವನ್ನು ತೆಗೆದುಕೊಂಡು ಅವನಿಗೆ ಪ್ರಿಯವಾದ ಲಾಡು ಉಂಡೆಯನ್ನು ಕೊಡಿಸಿ ಇವತ್ತು ಕೊಡ ನಾನೇ ನಿನಗೆ ಶಾಲೆಗೆ ಬಿಡುತ್ತೇನೆ ನಡಿ ಎಂದು ಕರೆದು ಕೊಂಡು ಹೊಗುತ್ತಾನೆ.

ರಸ್ತೆಯಲ್ಲಿ ಶಂಕರನು ಅಪ್ಪಯ್ಯ ನಾನು ಶಾಲೆಗೆ ಹೊಗುವುದಿಲ್ಲ ಎಂದು ಅಳುತ್ತಿದ್ದ. ಆಗ ರಂಗಪ್ಪ ಶಾಲೆಯ ಬಳಿ ಇದ್ದ ಒಂದು ಸಣ್ಣ ಗುಡ್ದದ ಮೇಲೆ ಕರೆದುಕೊಂಡು ಹೋದ, ಕರೆದುಕೊಂಡು ಹೋಗಿ ಆ ಗುಡ್ಡದ ಮೇಲೆ ಹತ್ತಿದ,ತಂಪಾದ ಗಾಳಿ ಜೊರಾಗಿ ಬೀಸುತ್ತಿತ್ತು.

ನೋಡು ಈ ಗಾಳಿಯನ್ನು ಹಿಡಿಯುವುದಕ್ಕೆ ಆಗುವುದಿಲ್ಲ, ಕಣ್ಣಿಗೆ ಕಾಣುವುದಿಲ್ಲ ಆದರೆ ದೊಡ್ಡ ದೊಡ್ಡ ಕಲ್ಲುಗಳಿಂದ ಕೂಡಿದ ಗುಡ್ಡವನ್ನು ಎದುರಿಸಿ ಮುಂದೆ ಹೋಗುತ್ತಿದೆ. ಅದೇ ರೀತಿ ನೀನು ಮೊದ ಮೊದಲು ಶಾಲೆಗೆ ಹೊರಟಾಗ ಇಂತಹ ಅಡ್ಡಿ-ಆತಂಕಗಳು ಸಾಕಷ್ಟು ಬರುತ್ತವೆ.

ಅದು ಯಾವುದನ್ನೂ ಲೆಕ್ಕಿಸದೆ ಧೈರ್ಯದಿಂದ ಮುಂದೆ ಹೋಗು. ಭಯ, ಸಂಕೋಚ, ಅಂಜಿಕೆ ಇದೆಲ್ಲ ಬಿಟ್ಟು ಮುಂದೆ ಸಾಗಿದರೆ ಗೆಲುವು ನಿನ್ನದೇ ಎಂದು ರಂಗಪ್ಪ ಹೇಳುತ್ತಾನೆ .ಆಗ ಶಂಕರನಿಗೆ ಧೈರ್ಯ ಮೂಡಿಬಂದು ಅದೇ ತಕ್ಷಣ ಶಂಕರನು ನಿರ್ಧಾರ ಮಾಡಿದ.ಅಪ್ಪಯ್ಯ ನೀನು ಮನೆಗೆ ಹೋಗು ನಾನು ಶಾಲೆಗೆ ಹೋಗುತ್ತೇನೆಂದು ಹೇಳಿ ಶಾಲೆಗೆ ಹೋದನು.

Spread the love

Related Articles

Leave a Reply

Your email address will not be published. Required fields are marked *

Back to top button