ಕಥೆ

ಹುಂಜವನ್ನು ಹುಡುಕಿ ಬಂದ ಸೂರ್ಯ

ಆಗ ಬೇಸಿಗೆ ದಿನಗಳಾಗಿದ್ದವು. ಸುಡುಬಿಸಿಲಿನ ಧಗೆಗೆ ಪ್ರತಿಯೊಬ್ಬರೂ ಹೈರಾಣಾಗಿದ್ದರು. ಅನೇಕ ಮಂದಿ ಸೂರ್ಯನಿಗ ಬಾಯಿಗೆ ಬಂದಹಾಗೆ ಬೈಯುತ್ತಿದ್ದರು. ಇದರಿಂದ ಕುಪಿತಗೊಂಡ ಸೂರ್ಯದೇವ ಜಗತ್ತಿನಿಂದಲೇ ಹಿಂದೆ ಸರಿದುಬಿಟ್ಟ. ಇದರಿಂದ ಭೂಮಿಯ ಶಾಖ ಕಡಿಮೆಯಾಗಿ ತಣ್ಣಗಾಗ ತೊಡಗಿತು ಮತ್ತು ಸದಾ ಕತ್ತಲು ಎಲ್ಲೆಲ್ಲೂ ಆವರಿಸಿತು. ಇದರಿಂದ ಜನರಿಗೆ ಭಯವುಂಟಾಗಿ ದಿಕ್ಕೇ ತೋಚದಾಯಿತು. ಅವರೆಲ್ಲಾ ಒಟ್ಟಿಗೆ ಸೂರ್ಯನನ್ನು ಪ್ರಾತಿಸಿ ಮತ್ತೆ ಆಕಾಶದಲ್ಲಿ ಕಾಣಿಸಿಕೊಳ್ಳುವಂತೆ ವಿನಂತಿಸಿಕೊಂಡರು . ಆದರೆ ಆತ ಮನವಿಯನ್ನು ತಿರಸ್ಕರಿಸಿದ. ಇದೇ ಸಮಯಕ್ಕೆ ಪಕ್ಷಿಗಳ ಸಮೂಹವು ಸೂರ್ಯನ ಬಳಿಗೆ ತಮ್ಮ ರಾಯಭಾರಿಯನ್ನು ಕಳುಹಿಸಿಕೊಡಲು ತೀರ್ಮಾನಿಸಿದವು . ಆ ರಾಯಭಾರಕ್ಕೆ ಹುಂಜವನ್ನೇ ಆರಿಸವು , ಕೊಡಲೆ ಕೂಡಲೆ ಹುಂಜವು ಸೀದ ಸೂರ್ಯದೇವನ ಅರಮನೆಗೆ ಹೋಗಿ ಸೂರ್ಯನಿಲ್ಲದ ಭೂಮಿಯಲ್ಲಿ ಜನರು, ಪ್ರಾಣಿ, ಪಕ್ಷಿಗಳು ಪಡುತ್ತಿರುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿತು. ಆದರೆ ಸೂರ್ಯ, ನಾನು ಹಿಡಿದ ಹಠದಿಂದ ಹಿಂದೆ ಸರಿಯುವುದಿಲ್ಲ ‘ನನ್ನ ನಿರ್ಧಾರ ಅಚಲ ಎಂದ’ ನಾನು ಮತ್ತೆ ಆಕಾಶದಲ್ಲಿ ಬರುವುದಿಲ್ಲ ನೀನು ಹೋಗಿ ಈ ಮಾತನ್ನು ಎಲ್ಲರಿಗೂ ಹೇಳು ಎಂದ. ‘ಅಂದರೆ ನಾನು ಕತ್ತಲೆಯಲ್ಲಿಯೇ ಮನೆಗೆ ಹೋಗಬೇಕೆ? ಎಂದು ಹುಂಜ ಕೇಳಿತು. ಹಾದಿ ಮಧ್ಯೆ ನನ್ನನ್ನು ತಿನ್ನಲು ಚಿರತೆ ಕಾದು ಕುಳಿತಿದೆ ಅದು ನನ್ನ ಮೇಲೆ ಎಗರಿದರೆ ನಾನು ಕೂಗಿಕೊಳ್ಳುತ್ತೇನೆ. ಆಗ ದಯಮಾಡಿ ಹೋಡಿ ಬಾ ಎಂದು ಹೇಳಿ ಅದು ಹೊರ ನಡೆಯಿತು. ಸ್ವಲ್ಪ ದೂರ ಹೋದ ಹುಂಜ ತಕ್ಷಣ ತುಂಬಾ ಜೊರಾಗಿ ಕೂಗಿಕೊಂಡಿತು. ಆಗ ಸೂರ್ಯ ಆತುರದಿಂದ ಹೊರಗೆ ಬಂದ. ಆತ ಹುಂಜಕ್ಕಾಗಿ ಎಲ್ಲಾ ಕಡೆ ಹುಡುಕಾಡಿದ ಆದರೆ ಎಲ್ಲಿಯೂ ಹುಂಜ ಕಾಣಲಿಲ್ಲ . ಆದರಿಂದ ನಿತ್ಯವೂ ಸೂರ್ಯ ಹುಂಜ ಕೂಗಿದ ಮೇಲೆ ಅದನ್ನು ಹುಡುಕಿಕೊಂಡು ಬರತೊಡಗಿದ. ಆತ ಹುಂಜಕ್ಕಾಗಿ ಜಗತ್ತಿನಗಲಕ್ಕೂ ಹುಡುಕಿಕೊಂಡು ಬರತೊಡಗಿದ. ಆತ ಹುಂಜಕ್ಕಾಗಿ ಜಗತ್ತಿನಗಲಕ್ಕೂ ಪಯಣಿಸಿದ. ಆದರೆ ಆ ಹುಂಜ ಎಲ್ಲಿಯೂ ಪತ್ತೆಯಾಗಲಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button