ಮಹಾತಾಯಿಯ ಮಮತೆ

ಒಂದು ಊರಿನಲ್ಲಿ ಒಬ್ಬಳು ರಾಧ ಎಂಬ ಮಹಿಳೆ ಇರುತ್ತಾಳೆ. ಅವಳು ಪ್ರತಿದಿನ ರಾಯಗಡ ಎಂಬ ಕೋಟೆಯ ಊರಿನೊಳಗೆ ಹಾಲು ಮಾರಲು ಬರುತ್ತಿದ್ದಳು. ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಊರಿನಲ್ಲಿ ಜಾತ್ರೆ ನಡೆಯುತ್ತಿತ್ತು. ಆ ದಿನ ಅವಳು ಹಾಲು ಮಾರಿ ಬರುವಷ್ಟರಲ್ಲಿ ಸೂರ್ಯ ಮುಳುಗಿ ಕತ್ತಲಾಗಿತ್ತು. ಅವಸರವಾಗಿ ಓಡಿ ಕೋಟೆಯ ಬಾಗಿಲ ಬಳಿ ಬರುತ್ತಾಳೆ, ಅಷ್ಟರಲ್ಲಿ ಕೋಟೆಯ ಬಾಗಿಲು ಮುಚ್ಚಿತು.
ಕಾವಲುಗಾರನ ಬಳಿ ಹೋಗಿ ಬೇಡಿಕೊಂಡಳು. ಆದರೆ ಕಾವಲುಗಾರ ರಾಜನ ಆಜ್ಞೆಯನ್ನು ನಾನು ಮೀರುವುದಿಲ್ಲವೆಂದು ಕಾರಣ ಕೊಟ್ಟು ನಿರಾಕರಿಸುತ್ತಾನೆ. ಅದೇ ಹೊತ್ತಿಗೆ ಆಕೆಗೆ ಮಗುವಿನ ಅಳು ಕಿವಿಗೆ ಬಿತ್ತು. ಆಗ ಏನಾದರು ಮಾಡಿ ಮನೆಗೆ ಹೋಗಬೇಕಲ್ಲ ಎಂದು ಯೋಚಿಸುತ್ತಿರುತ್ತಾಳೆ, ತಲೆಯನ್ನು ತಗ್ಗಿಸಿ ನೋಡಿದರೆ ಕೆಳಗೆ ಆಳವಾದ ಕಂದಕವಿರುತ್ತದೆ.
ಆ ಕಂದಕವನ್ನು ಲೆಕ್ಕಿಸದೆ ಧೈರ್ಯದಿಂದ ಹಾರುತ್ತಾಳೆ. ಕಂದಕವನ್ನು ದಾಟಿ ಮನೆ ಸೇರಿ ಮಗುವಿಗೆ ಹಾಲುಣಿಸುತ್ತಾಳೆ. ಈ ವಿಷಯ ತಿಳಿದ ಮಯೂರ ಮಹಾರಾಜ,ರಾಧೆಯ ಧೈರ್ಯವನ್ನು ಕಂಡು ಅವನಿಗೆ ಆಶ್ಚರ್ಯ ಉಂಟು ಮಾಡಿತು. ಅವಳನ್ನು ಆಸ್ಥಾನಕ್ಕೆ ಕರೆಸಿ ಕೇಳಿದನು. ತಾಯಿ ಕೋಟೆಯನ್ನು ಏಕೆ ಜಿಗಿದೆ? ಎಂದು ಪ್ರಶ್ನಿಸಿದನು. ಪ್ರಭು ಮನೆಯಲ್ಲಿ ನಾಲ್ಕು ತಿಂಗಳ ಮಗುವನ್ನು ಬಿಟ್ಟು ಬಂದಿದ್ದೆ.
ಹಾಲು ಹಾಕುವಷ್ಟರಲ್ಲಿ ಕತ್ತಲಾಗಿತ್ತು ಕೋಟೆಯ ಬಾಗಿಲು ಮುಚ್ಚಿತ್ತು, ಮಗುವಿಗೆ ಹಸಿವಾಗಿರುತ್ತದೆ, ಹೆತ್ತ ಕರುಳಿನ ಸಂಕಟ ಮಗುವನ್ನು ಬಿಟ್ಟು ಇರಲಾರದೆ ತಪ್ಪು ಮಾಡಿಬಿಟ್ಟೆ ದಯವಿಟ್ಟು ಕ್ಷಮಿಸಿ ಮಹಾಪ್ರಭು ಎಂದು ಕೇಳಿಕೊಂಡಳು. ಈ ವಿಷಯ ಕೇಳಿದ ಮಯೂರ ರಾಜ ತಾಯಿಯ ಪ್ರೀತಿ, ಕರುಣೆ, ಕೋಟೆಗಿಂತ ದೊಡ್ಡದು. ತಾಯಿ ಮಮತೆ ಮುಂದೆ ಯಾವುದು ಹೆಚ್ಚಿಲ್ಲ ಎಂದು ಕೊಂಡಾಡಿದನು. ಆ ಮಹಾತಾಯಿಯನ್ನು ಗೌರವಿಸಿ ಅವಳ ನೆನಪಿಗಾಗಿ ಬ್ರಿಡ್ಜ್ ಅನ್ನು ಕಟ್ಟಿಸಿ ಅದಕ್ಕೆ ರಾಧೆ ಎಂದು ಹೆಸರಿಟ್ಟನು.
ನೀತಿ: ತಾಯಿಗಿಂತ ಮಿಗಿಲಾದ ದೇವರಿಲ್ಲ, ಪೂಜಿಸಿ ಗೌರವಿಸಿ




